ಭಾನುವಾರ, ನವೆಂಬರ್ 1, 2020
19 °C

ಪುರುಷರ ಗುಪ್ತಾಂಗ ಹೋಲುವ ಕೇಕ್‌ ಕತ್ತರಿಸಿದ ನಟಿ: ವ್ಯಾಪಕ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಟ್ಟುಹಬ್ಬದ ಆಚರಣೆಯು ಪ್ರತಿಯೊಬ್ಬರ ಬದುಕಿನ ಅವಿಸ್ಮರಣೀಯ ಕ್ಷಣ. ಕೇಕ್‌ ಕತ್ತರಿಸಿ ಅಥವಾ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಜನ್ಮದಿನ ಆಚರಿಸಿಕೊಳ್ಳುವವರು ಇದ್ದಾರೆ. ಕೆಲವರು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತೆರಳಿ ಅಲ್ಲಿನವರಿಗೆ ಕೈಲಾದ ಸಹಾಯ ಮಾಡಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಉಂಟು. ನಟ, ನಟಿಯರು ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬದ ದಿನದಂದು ಕಾಲ ಕಳೆಯುತ್ತಾರೆ.


ನಟಿ ನಿಯಾ ಶರ್ಮಾ (ಇನ್‌ಸ್ಟಾಗ್ರಾಂ ಚಿತ್ರ)

ಆದರೆ, ಹಿಂದಿಯ ಕಿರುತೆರೆ ನಟಿ ನಿಯಾ ಶರ್ಮಾ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರೀತಿಯು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಅಂದಹಾಗೆ ಆಕೆ ತನ್ನ 30ನೇ ವರ್ಷದ ಜನ್ಮದಿನವನ್ನು ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಆಕೆಯ ಸ್ನೇಹಿತರು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವಿಡಿಯೊ ಮತ್ತು ಫೋಟೊಗಳನ್ನು ಆಕೆ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇದು ನನ್ನ ಡರ್ಟಿ 30ನೇ ಜನ್ಮದಿನ’ ಎಂದು ಬರೆದುಕೊಂಡಿದ್ದಾರೆ.

ಈ ರೀತಿಯ ಕೇಕ್‌ಗಳನ್ನು ಹೆಚ್ಚಾಗಿ ಬ್ಯಾಚುಲರ್‌ ಪಾರ್ಟಿಗೆ ಮಾಡಿಸುವುದು ಉಂಟು. ನಿಯಾ ತನ್ನ ಜನ್ಮದಿನದ ಆಚರಣೆಗೆ ಈ ಮಾದರಿಯ ಕೇಕ್‌ ಮಾಡಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಈ ವರ್ತನೆಗೆ ನೆಟ್ಟಿಗರು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ.

ನಿಯಾ ‘ಫಿಯರ್‌ ಫ್ಯಾಕ್ಟರ್; ಖತ್ರೋನ್ ಕೆ ಖಿಲಾಡಿ’ ರಿಯಾಲಿಟಿ ಶೋನ ಸೀಸನ್‌ 11ರ ವಿಜೇತೆಯೂ ಹೌದು. ಹಿಂದಿಯ ನಾಗಿನ್ ಧಾರಾವಾಹಿಯ 4ನೇ ಸರಣಿಯಲ್ಲೂ ನಟಿಸಿದ್ದಾರೆ. ಕಳೆದ ವರ್ಷ ನಡೆದ ಹಿಂದಿಯ ಬಿಗ್‌ಬಾಸ್‌ ಸೀಸನ್‌ 13ರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.

ಕೋವಿಡ್‌–19 ಪರಿಣಾಮ ಸಾಮೂಹಿಕವಾಗಿ ಬರ್ತ್‌ಡೇ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಕೋವಿಡ್‌ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ನಿಯಾ ಜನ್ಮದಿನ ಆಚರಿಸಿಕೊಂಡಿರುವುದು ಈಗ ವಿವಾದ ಸೃಷ್ಟಿಸಿದೆ.

‘ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೊ ಮತ್ತು ಫೋಟೊಗಳನ್ನು ಹಂಚಿಕೊಳ್ಳುವುದು ಸರಿಯಲ್ಲ. ಜಾಲತಾಣಗಳಲ್ಲಿ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವ ಬಗ್ಗೆ ಮುಂದಾಲೋಚಿಸಬೇಕು. ಸಾಕಷ್ಟು ಜನರು ಇದರಲ್ಲಿ ಸಕ್ರಿಯರಾಗಿರುತ್ತಾರೆ ಎಂಬ ಅರಿವು ಇರಲಿ’ ಎಂದು ನಿಯಾ ಶರ್ಮಾಗೆ ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.