ಹೈದರಾಬಾದ್: ತೆಲುಗು ನಟ ನಿತಿನ್ ಅವರು ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಆಹಾರಕ್ಕೆ ಸಂಬಂಧಿಸಿದ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಅದನ್ನು ಕೇಳಿದರೆ ನೀವು ನಿಬ್ಬೆರಗಾಗುವುದು ನಿಶ್ಚಿತ.

ಟಾಲಿವುಡ್ನಲ್ಲಿ ನಿರೀಕ್ಷೆ ಹೆಚ್ಚಿಸಿರುವ‘ಭೀಷ್ಮ’ ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಿತಿನ್ಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಇದೇ 21ರಂದ ತೆರೆಗೆ ಬರಲಿದೆ.

ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇತ್ತೀಚೆಗೆ ನಿತಿನ್ ಮತ್ತು ರಶ್ಮಿಕಾತೆಲುಗಿನ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದರು. ಈ ವೇಳೆ ನಿತಿನ್, ರಶ್ಮಿಕಾಗೆ ಸಂಬಂಧಿಸಿದ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ಚಿಪ್ಸ್, ಸಿಹಿ ತಿಂಡಿಗಳನ್ನು ಸಂಜೆ ವೇಳೆ ತಿನ್ನುತ್ತಾರೆ, ಆದರೆ ರಶ್ಮಿಕಾ ಮಾತ್ರ ನಾಯಿಬಿಸ್ಕತ್ ತಿನ್ನುತ್ತಾರೆ ಎಂಬ ವಿಷಯವನ್ನು ನಿತಿನ್ ಬಹಿರಂಗಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ ‘ಇಲ್ಲ, ಯಾವಾಗಲೂ ನಾನು ನಾಯಿಬಿಸ್ಕತ್ ತಿನ್ನುವುದಿಲ್ಲ, ಒಂದು ಸಲ ರುಚಿ ನೋಡುವ ಸಲುವಾಗಿ ನಾಯಿಬಿಸ್ಕತ್ ಟೇಸ್ಟ್ ಮಾಡಿದ್ದೆ‘ ಎಂದು ಹೇಳಿದ್ದಾರೆ.

ಆಂಧ್ರ ಮತ್ತು ತೆಲಂಗಾಣ ಮಾಧ್ಯಮಗಳಲ್ಲಿ ರಶ್ಮಿಕಾ ನಾಯಿ ಬಿಸ್ಕತ್ ತಿನ್ನುವ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಸೌಂದರ್ಯದ ಗುಟ್ಟು ನಾಯಿ ಬಿಸ್ಕತ್ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಹೆಬಾ ಪಟೇಲ್, ಅನಂತ್ನಾಗ್ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ವೆಂಕಿ ಕುದುಮುಲ.ಮಹತಿ ಸ್ವರಾ ಸಾಗರ್ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾವನ್ನುಪಿಡಿವಿ ಪ್ರಸಾದ್ ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.