ಬುಧವಾರ, ಫೆಬ್ರವರಿ 19, 2020
27 °C

ನಿತಿನ್‌ಗೆ ಮತ್ತೆ ರಶ್ಮಿಕಾ ಜೊತೆ ಮತ್ತೆ ನಟಿಸುವಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲುಗಿನಲ್ಲಿ ಇತ್ತೀಚೆಗೆ ಸ್ಟಾರ್ ನಟರ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಿವೆ. ಈ ಸಾಲಿಗೆ ಸೇರುವ ಮತ್ತೊಂದು ಸಿನಿಮಾ ನಿತಿನ್ ಅಭಿಯನದ ‘ಭೀಷ್ಮ’. ಈ ಚಿತ್ರವು ಇದೇ ತಿಂಗಳ 21ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಭೀಷ್ಮದಲ್ಲಿ ನಾಯಕ ನಿತಿನ್ ಪಾತ್ರವು ಶೀರ್ಷಿಕೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎನ್ನುತ್ತಿವೆ ಮೂಲಗಳು.

ಮಹಾಭಾರತದ ಭೀಷ್ಮರಂತೆ ಚಿತ್ರದಲ್ಲಿ ನಿತಿನ್ ಏಕಾಂಗಿಯಾಗಿರುವುದಿಲ್ಲ. ಬದಲಾಗಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ಡ್ಯುಯೆಟ್ ಹಾಡಲಿದ್ದಾರೆ ಎಂಬುದನ್ನು ಟೀಸರ್ ಹಾಗೂ ಪೋಸ್ಟರ್‌ಗಳಲ್ಲಿ ತೋರಿಸಿದೆ ಚಿತ್ರತಂಡ.

ಈ ಮಧ್ಯೆ ನಿತಿನ್, ನಾಯಕಿ ರಶ್ಮಿಕಾ ಹಾಗೂ ನಿರ್ದೇಶಕ ವೆಂಕಿ ಕುಡುಮುಲ ಜೊತೆ ಕೆಲಸ ಮಾಡಿರುವುದಕ್ಕೆ ತುಂಬಾನೇ ಖುಷಿ ಇದೆ ಎಂದಿದ್ದಾರೆ. ವೆಂಕಿ ಕುಡುಮುಲ ಅವರಿಗೆ ಧನ್ಯವಾದ ಹೇಳಿದ ನಿತಿನ್, ರಶ್ಮಿಕಾ ಜೊತೆ ಪುನಃ ಕೆಲಸ ಮಾಡಲು ಖುಷಿ ಇದೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ನಿತಿನ್ ‘ವೆಂಕಿ ಕುಡುಮುಲ ನೀವು ನನಗೆ ತುಂಬಾ ಇಷ್ಟವಾಗಿದ್ದೀರಿ. ನಿಮ್ಮ ಬಗ್ಗೆ ಪದಗಳಲ್ಲಿ ಹೇಳುವುದು ಕಷ್ಟ. ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದ. ರಶ್ಮಿಕಾ ನೀವು ನನ್ನ ಫೇವರಿಟ್‌. ನಿಮ್ಮ ಕಠಿಣ ಶ್ರಮ ಹಾಗೂ ಸಹಕಾರಕ್ಕೆ ಧನ್ಯವಾದ. ನಿಮ್ಮ ಜೊತೆ ಶೀಘ್ರದಲ್ಲೇ ಮತ್ತೆ ಕೆಲಸ ಮಾಡುವ ಬಯಕೆ ಇದೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು