ಬಹುಭಾಷಾ ನಟಿ ನಿತ್ಯಾ ಮೆನನ್ ಸಾಮಾಜಿಕ ಮಾಧ್ಯಮದಲ್ಲಿ ತಾಯ್ತನದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ADVERTISEMENT
ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ನಟಿ ನಿತ್ಯಾ ಮೆನನ್ ಈ ಫೋಟೊಗಳನ್ನು ಹಂಚಿಕೊಳ್ಳುವುದಕ್ಕೆ ಒಂದು ಕಾರಣ ಕೂಡ ಇದೆ.
ಚಿತ್ರ: ಇನ್‌ಸ್ಟಾಗ್ರಾಮ್
ಅದುವೇ ‘ವಂಡರ್ ವುಮೆನ್’ ಸಿನಿಮಾ. ಈ ಸಿನಿಮಾದಲ್ಲಿನ ತಾಯಿಯ ಪಾತ್ರಕ್ಕಾಗಿ ಅಭ್ಯಾಸ ನಡೆಸುವಾಗ ಕ್ಲಿಕ್ಕಿಸಿಕೊಂಡ ಚಿತ್ರಗಳಾಗಿವೆ.
ಚಿತ್ರ: ಇನ್‌ಸ್ಟಾಗ್ರಾಮ್
ವಿಶೇಷ ಏನೆಂದರೆ ತಾಯ್ತನ ಹಾಗೂ ಮಗುವಿನ ಆರೈಯಲ್ಲಿ ನಟಿ ತಮ್ಮನ್ನು ತಾವು ತೊಡಗಿಸಿಕೊಂಡ ಬಗ್ಗೆ ಚಿತ್ರಗಳಲ್ಲಿ ಕಾಣಬಹುದು. ತಾಯಿಯ ಪಾತ್ರಕ್ಕಾಗಿ ನಟಿ ಮಾಡಿದ ಅಭ್ಯಾಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಜೊತೆಗೆ ಸಿನಿಮಾ ಸೆಟ್‌ನ ಅನುಭವ ಹಾಗೂ ತಂಡದ ಜೊತೆಗೆ ಕಳೆದ ಸುಂದರ ಕ್ಷಣದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಇನ್ನು, ನಟಿ ನಿತ್ಯಾ ಮೆನನ್ ಅವರು ಕನ್ನಡದಲ್ಲಿ ಮೈನಾ, ಕೋಟಿಗೊಬ್ಬ-2 ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.