‘ಗೋಲ್ಡನ್ ಸ್ಟಾರ್’ ಗಣೇಶ್ ಮತ್ತು ಪ್ರಶಾಂತ್ ರಾಜ್ ಕಾಂಬಿನೇಷನ್ನಡಿ ಬಂದಿದ್ದ ‘ಜೂಮ್’ ಚಿತ್ರ ಜನರಿಗೆ ಮೋಡಿ ಮಾಡಿತ್ತು. ಮತ್ತೆ ಈ ಜೋಡಿ ಒಂದಾಗಿದ್ದು ‘ಆರೆಂಜ್’ನಲ್ಲಿ. ಈ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ.

‘ಜೂಮ್’ಗಿಂತ ಇದು ಕಲರ್ಫುಲ್ ಆಗಿದೆ. ನೋಡುಗರಿಗೆ ಭರ್ಜರಿ ಮನರಂಜನೆ ಸಿಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ತೆಲುಗಿನಲ್ಲಿ ಎಂಟು ವರ್ಷದ ಹಿಂದೆ ಇದೇ ಹೆಸರಿನ ಚಿತ್ರವೊಂದು ತೆರೆಕಂಡಿತ್ತು. ಅದರಲ್ಲಿ ರಾಮ್ಚರಣ್ ತೇಜ ಮತ್ತು ಜೆನಿಲಿಯಾ ಡಿಸೋಜ ನಾಯಕ, ನಾಯಕಿಯಾಗಿ ತೆರೆ ಹಂಚಿಕೊಂಡಿದ್ದರು. ತೆಲುಗಿನ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಅಪ್ಪಟ ಕನ್ನಡ ಚಿತ್ರ ಎನ್ನುವುದು ಚಿತ್ರತಂಡದ ವಿವರಣೆ.

ಡಿಸೆಂಬರ್ಗೂ ಮತ್ತು ಗಣೇಶ್ಗೂ ಬಿಡಿಸಲಾಗದ ನಂಟು. ಅವರು ನಟಿಸಿರುವ ಚಿತ್ರಗಳು ಡಿಸೆಂಬರ್ನಲ್ಲಿ ಬಿಡುಗಡೆಯಾಗಿ ಗೆದ್ದಿರುವುದೇ ಇದಕ್ಕೆ ಕಾರಣ. ‘ಮುಂಗಾರು ಮಳೆ’, ‘ಜೊತೆ ಜೊತೆಯಲಿ’, ‘ಚಮಕ್’ ಚಿತ್ರಗಳು ಇದಕ್ಕೆ ನಿದರ್ಶನ. ಹಾಗಾಗಿ, ‘ಆರೆಂಜ್’ ಕೂಡ ಮುಂದಿನ ತಿಂಗಳು ಜನರ ಮುಂದೆ ಬರಲು ಕಾದುಕೂತಿದೆ.

ಡಿ. 7ರಂದು ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ‘ರಾಜಕುಮಾರ’ ಚಿತ್ರದಲ್ಲಿ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ಗೆ ಜೋಡಿಯಾಗಿದ್ದ ಪ್ರಿಯಾ ಆನಂದ್ ಅವರೇ ಇಲ್ಲಿ ಗಣೇಶ್ಗೆ ನಾಯಕಿ. ಕನ್ನಡದಲ್ಲಿ ಅವರಿಗೆ ಇದು ಎರಡನೇ ಚಿತ್ರ.

ನಾಯಕ ಗಣೇಶ್ ಆಗರ್ಭ ಶ್ರೀಮಂತ. ಒಮ್ಮೆ ರೈಲಿನಲ್ಲಿಪ್ರಯಾಣಿಸುವಾಗ ನಾಯಕಿ ಖುಷಿ ಭೇಟಿಯಾಗುತ್ತಾಳೆ. ಒಮ್ಮೆಲೆ ಅವನಲ್ಲಿ ಆಕೆಯ ಮೇಲೆ ಪ್ರೇಮಾಂಕುರವಾಗುತ್ತದೆ. ತನ್ನ ಪ್ರೀತಿ ಬಗ್ಗೆ ಹೇಳಲು ಮುಂದಾಗುವ ವೇಳೆಗೆ ಜನಸಂದಣಿಯಲ್ಲಿ ಆಕೆ ಮರೆಯಾಗುತ್ತಾಳೆ. ಕೊನೆಗೆ, ಅವಳು ಅವನಿಗೆ ಸಿಗುತ್ತಾಳೆಯೇ, ತನ್ನ ಪ್ರೀತಿಯನ್ನು ಅವಳಿಗೆ ಹೇಳುತ್ತಾನೆಯೇ ಎನ್ನುವುದೇ ಕಥಾಹಂದರ.

ಗಣೇಶ್ ವಿಭಿನ್ನ ಹೇರ್ಸ್ಟೈಲ್ನಲ್ಲಿ ಹಲವು ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಚೆನ್ನೈ, ಹೈದರಾಬಾದ್, ಬೆಂಗಳೂರು, ಯುರೋಪ್ನಲ್ಲೂ ಶೂಟಿಂಗ್ ನಡೆಸಲಾಗಿದೆ. ಎಸ್. ತಮನ್ ಸಂಗೀತ ಸಂಯೋಜನೆಯಿದೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.

ರವಿವರ್ಮ ಸಾಹಸ ಇರುವ ಈ ಚಿತ್ರಕ್ಕೆ ರವಿಚಂದ್ರನ್ ಅವರ ಸಂಕಲನವಿದೆ. ನವೀನ್ ರಾಜ್ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.