ಈ ವಾರ ಒಟಿಟಿಯ ವೇದಿಕೆಗಳಲ್ಲಿ ಹಲವು ಹೊಸ ಸಿನಿಮಾಗಳು ತೆರೆ ಕಾಣುತ್ತಿವೆ. ಪ್ರಣಯ, ಆ್ಯಕ್ಷನ್, ಹಾಸ್ಯ, ಹಾರರ್ ಥ್ರಿಲ್ಲರ್ ಸೇರಿದಂತೆ ಹಲವು ಸಿನಿಮಾಗಳು ನವೆಂಬರ್ 18ರಿಂದ ನವೆಂಬರ್ 24ರ ಅವಧಿಯಲ್ಲಿ ಒಟಿಟಿಯಲ್ಲಿ ತೆರೆ ಕಾಣಲಿವೆ.

ದಿ ಬೆಂಗಾಲ್ ಫೈಲ್ಸ್

ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಸಿಮ್ರತ್ ಕೌರ್, ಅನುಪಮ್ ಖೇರ್, ಶಾಶ್ವತ ಚಟರ್ಜಿ, ಪುನೀತ್ ಇಸ್ಸಾರ್, ರಾಜೇಶ್ ಖೇರಾ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿರುವ ಹಾಗೂ ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ 'ದಿ ಬೆಂಗಾಲ್ ಫೈಲ್ಸ್' ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಎಲ್ಲಿ ನೋಡಬಹುದು: ಜೀ5

ಭಾಷೆ: ಹಿಂದಿ

ಬಿಡುಗಡೆ: ನ. 21

ಜಿದ್ದಿ ಇಷ್ಕ್

ಆದಿತಿ ಪೋಹಂಕರ್, ಸುಮೀತ್ ವ್ಯಾಸ್, ಪ್ರಿಯಾಂಶು ಪೈನ್ಯುಲಿ, ಬರ್ಖಾ ಬಿಷ್ಟ್, ಪರಂಬ್ರತ ಚಟ್ಟೋಪಾಧ್ಯಾಯ, ರಿಯಾ ಸೇನ್, ಲಬೋನಿ ಸರ್ಕಾರ್ ಮತ್ತು ಅನನ್ಯ ಸೇನ್ ನಟಿಸಿರುವ ಜಿದ್ದಿ ಇಷ್ಕ್ ಸಿನಿಮಾ ಒಟಿಟಿಗೆ ಲಗ್ಗೆ ಇಡುತ್ತಿದೆ. ಈ ಸಿನಿಮಾವು ರಾಜ್ ಚಕ್ರವರ್ತಿ ಅವರ ಸ್ವಂತ ನಿರ್ದೇಶನದ ಪರಿಣೀತಾದ ರಿಮೇಕ್ ಆಗಿದೆ. ಈ ಸರಣಿಯು ಹಿಂದಿ ಮತ್ತು ಬಂಗಾಳಿ ಚಿತ್ರರಂಗದಿಂದ ಬರುವ ಪ್ರತಿಭಾನ್ವಿತ ತಾರಾಗಣವನ್ನು ಹೊಂದಿದೆ.

ಎಲ್ಲಿ ನೋಡಬಹುದು: ಜಿಯೋ ಹಾಟ್ಸ್ಟಾರ್

ಭಾಷೆ: ಹಿಂದಿ

ಬಿಡುಗಡೆ: ನ. 21

ದಿ ಫ್ಯಾಮಿಲಿ ಮ್ಯಾನ್ ಸೀಸನ್ 3

ರಾಜ್ ಮತ್ತು ಡಿ.ಕೆ. ಸುಮನ್ ಕುಮಾರ್ ಮತ್ತು ತುಷಾರ್ ಸೇಯ್ತ್ ನಿರ್ದೇಶನದಲ್ಲಿ ಮೂಡಿಬಂದಿರುವ ದಿ ಫ್ಯಾಮಿಲಿ ಮ್ಯಾನ್ ಸೀಸನ್ 3 ಸಿನಿಮಾ ಒಟಿಟಿಗೆ ಪ್ರವೇಶಿಸುತ್ತಿದೆ. ಈ ಸಿನಿಮಾದಲ್ಲಿ ಮನೋಜ್ ಬಾಜಪೇಯಿ, ಪ್ರಿಯಾ ಮಣಿ, ಜೈದೀಪ್ ಅಹ್ಲಾವತ್, ಶರೀಬ್ ಹಶ್ಮಿ, ನಿಮ್ರತ್ ಕೌರ್, ಆಶ್ಲೇಷಾ ಠಾಕೂರ್, ವೇದಾಂತ್ ಸಿನ್ಹಾ, ಶ್ರೇಯಾ ಧನ್ವಂತರಿ, ಹರ್ಮನ್ ಸಿಂಘಾ, ದರ್ಶನ್ ಕುಮಾರ್, ಸೀಮಾ ಬಿಸ್ವಾಸ್, ವಿಪಿನ್ ಶರ್ಮಾ ಮತ್ತು ಗುಲ್ ಪನಾಗ್ ನಟಿಸಿದ್ದಾರೆ.

ಎಲ್ಲಿ ನೋಡಬಹುದು: ಅಮೆಜಾನ್ ಪ್ರೈಮ್

ಭಾಷೆ: ಹಿಂದಿ

ಬಿಡುಗಡೆ: ನ. 21

ಶೇಡ್ಸ್ ಆಫ್ ಲೈಫ್

ಇಶಾನ್ ಖಟ್ಟರ್, ವಿಶಾಲ್ ಜೇತ್ವಾ, ಜಾನ್ವಿ ಕಪೂರ್ ಅಭಿನಯದ ಶೇಡ್ಸ್ ಆಫ್ ಲೈಫ್ ಸಿನಿಮಾ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ನೀರಜ್ ಘಯ್ವಾನ್ ನಿರ್ದೇಶನದ ಈ ಚಿತ್ರ ಭಾರತೀಯ ಪೊಲೀಸ್ ಇಲಾಖೆಗೆ ಸೇರುವ ಕನಸು ಕಾಣುವ ಇಬ್ಬರು ಬಾಲ್ಯದ ಸ್ನೇಹಿತರ ಮೇಲೆ ಕೇಂದ್ರೀಕರಿಸುತ್ತದೆ. ಮುಂದೆ ಏನಾಗುತ್ತದೆ ಎಂಬುದು ಕಥೆಯ ತಿರುಳನ್ನು ರೂಪಿಸುತ್ತದೆ.

ಎಲ್ಲಿ ನೋಡಬಹುದು: ನೆಟ್ಫ್ಲಿಕ್ಸ್

ಭಾಷೆ: ಮಲಯಾಳಂ

ಬಿಡುಗಡೆ: ನ. 21

ಉಸಿರು

ಉಸಿರು ಸಿನಿಮಾವು ಒಂದು ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಚಲನಚಿತ್ರವಾಗಿದೆ. ತಿಲಕ್ ಶೇಖರ್ ಮತ್ತು ಪ್ರಿಯಾ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪನೇಮ್ ಪ್ರಭಾಕರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ.

ಎಲ್ಲಿ ನೋಡಬಹುದು: ಸನ್ ಎನ್ಎಕ್ಸ್ಟಿ

ಭಾಷೆ: ಕನ್ನಡ

ಬಿಡುಗಡೆ: 21

ಬೈಸನ್

ಮಾರಿ ಸೆಲ್ವರಾಜ್ ನಿರ್ದೇಶನದ ಧ್ರುವ ವಿಕ್ರಮ್ ಅಭಿನಯದ 2025ರ ಕ್ರೀಡಾ ನಾಟಕ ಮತ್ತು ಕಬಡ್ಡಿ ಆಟಗಾರ ಮಾನತಿ ಗಣೇಶನ್ ಅವರ ಜೀವನದಿಂದ ಪ್ರೇರಿತವಾಗಿದೆ. ಬೈಸನ್ ಎಂದೂ ಕರೆಯಲ್ಪಡುವ ಈ ಚಿತ್ರವು ಅಕ್ಟೋಬರ್ 17ರಂದು ಬಿಡುಗಡೆಯಾಗಿತ್ತು. ಈಗ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.

ಎಲ್ಲಿ ನೋಡಬಹುದು: ನೆಟ್ಫ್ಲಿಕ್ಸ್

ಭಾಷೆ: ತಮಿಳು

ಬಿಡುಗಡೆ: 21

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.