ಮುಂಬೈ: ಜುಗ್ ಜುಗ್ಗ್ ಜೀಯೊ ಚಿತ್ರದ ‘ನಾಚ್ ಪಂಜಾಬನ್‘ ಹಾಡನ್ನು ನನ್ನ ಅನುಮತಿಯಿಲ್ಲದೆಯೇ ಬಳಸಿಕೊಳ್ಳಲಾಗಿದೆ ಎಂದು ಪಾಕಿಸ್ತಾನಿ ಗಾಯಕ ಅಬ್ರಾರ್ ಉಲ್ ಹಕ್ ಆರೋಪಿಸಿದ್ದಾರೆ.
ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿನ ಹಾಡನ್ನು ನಕಲು ಮಾಡಲಾಗಿದೆ ಎಂದು ಅಬ್ರಾರ್ ಟ್ವೀಟ್ ಮಾಡಿದ್ದಾರೆ.
ವರುಣ್ ಧವನ್, ಅನಿಲ್ ಕಪೂರ್, ನೀತು ಕಪೂರ್ ಮತ್ತು ಕಿಯಾರ ಅಡ್ವಾಣಿ ಅವರ ನಟನೆಯ ಜುಗ್ ಜುಗ್ಗ್ ಜೀಯೊ ಚಿತ್ರದಲ್ಲಿ ಅಬ್ರಾರ್ 2002ರಲ್ಲಿ ರಚಿಸಿದ್ದ ಜನಪ್ರಿಯ ಹಾಡೊಂದನ್ನು ಬಳಸಿಕೊಂಡಿರುವ ಆರೋಪವಿದೆ.
ಆದರೆ, ಈ ಆರೋಪವನ್ನು ನಿರಾಕರಿಸಿರುವ ಮ್ಯೂಸಿಕ್ ಸಂಸ್ಥೆ ಟಿ ಸಿರೀಸ್, ನಾವು ಈ ಹಾಡನ್ನು ಕಾನೂನು ಪ್ರಕಾರವೇ ಖರೀದಿಸಿದ್ದೇವೆ. ಹೀಗಾಗಿ ಬಳಸಿಕೊಂಡಿದ್ದೇವೆ, ಅದರಲ್ಲಿ ಕಾಪಿರೈಟ್ ಉಲ್ಲಂಘನೆಯಾಗಿಲ್ಲ ಎಂದು ಟ್ವೀಟ್ ಮಾಡಿದೆ.