ಚಂದನವನದನಟಿ ಪವಿತ್ರಾ ಲೋಕೇಶ್ (43) ತೆಲುಗಿನಪ್ರಸಿದ್ಧ ಹಿರಿಯ ನಟ ನರೇಶ್ (63)ಅವರನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.
ಈ ಬಗ್ಗೆ ನರೇಶ್ ಅಥವಾ ಪವಿತ್ರಾಲೋಕೇಶ್ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಅವರೂ ಸಾಮಾಜಿಕ ಮಾಧ್ಯಮಗಳಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಆದರೆಪವಿತ್ರಾ,ನರೇಶ್ ಮದುವೆಯಾಗಿರುವ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅವರಫೋಟೊಗಳು ಮತ್ತು ವಿಡಿಯೊಗಳುಸಹ ವೈರಲ್ ಆಗಿವೆ.ಆದರೆ ಈ ವಿಚಾರ ಖಚಿತವಾಗಿಲ್ಲ.
ತೆಲುಗು ಮಾಧ್ಯಮಗಳಲ್ಲಿ ಇವರ ಮದುವೆ ಬಗ್ಗೆ ಮಂಗಳವಾರ ಸುದ್ದಿ ಪ್ರಸಾರವಾಗಿತ್ತು. ಈ ವಿಷಯದ ಕುರಿತಂತೆ ತೆಲುಗು ಮಾಧ್ಯಮಗಳು ಇಲ್ಲಿಯವರೆಗೂ ಖಚಿತ ಮಾಹಿತಿ ನೀಡಿಲ್ಲ.
ಕನ್ನಡದಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪವಿತ್ರಾ ಲೋಕೇಶ್, 2007ರಲ್ಲಿನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರನ್ನುಮದುವೆಯಾಗಿದ್ದಾರೆ. ಕನ್ನಡದ ನಾಯಿ ನೆರಳು ಸಿನಿಮಾದ ಅಭಿನಯಕ್ಕಾಗಿ ಇವರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ.
ತೆಲುಗಿನಲ್ಲೂ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನುಪವಿತ್ರಾ ಲೋಕೇಶ್ ಪಡೆದುಕೊಂಡಿದ್ದಾರೆ. ಇವರ ಸಹೋದರ ಆದಿ ಲೋಕೇಶ್ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ತೆಲುಗು ನಟ ನರೇಶ್ ಯಾರು? ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ ಎರಡನೇ ಪತ್ನಿ ವಿಜಯ ನಿರ್ಮಲ ಅವರ ಮಗ ನರೇಶ್. ಇವರು ಹುಟ್ಟಿದ ಬಳಿಕ ವಿಜಯ ನಿರ್ಮಲ ಮೊದಲ ಪತಿಯಿಂದ ವಿಚ್ಚೇದನ ಪಡೆದು ಕೃಷ್ಣ ಅವರನ್ನು ಮದುವೆಯಾದರು. ಕೃಷ್ಣ ಅವರ ಮೊದಲ ಪತ್ನಿ ಇಂದಿರಾ ದೇವಿ. ಮಹೇಶ್ ಬಾಬು ಇಂದಿರಾ ದೇವಿಯ ಮಗ.