ಗುರುವಾರ , ಆಗಸ್ಟ್ 18, 2022
25 °C

ನನಗೆ ಒಟಿಟಿಗಿಂತ ಸಿನಿಮಾ ಥಿಯೇಟರ್ ಇಷ್ಟ: ಪ್ರಭಾಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಒಟಿಟಿ ವೇದಿಕೆಗಳಿಗಿಂತ ನನಗೆ ಸಿನಿಮಾ ಥಿಯೇಟರ್ ಎಂದರೆ ತುಂಬಾ ಇಷ್ಟ ಎಂದು ನಟ ಪ್ರಭಾಸ್ ಹೇಳಿದ್ದಾರೆ.

ಒಟಿಟಿ ವೇದಿಕೆಗಳು ಹೆಚ್ಚು ಸದ್ದು ಮಾಡುತ್ತಿರುವ ಮತ್ತು ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಒಟಿಟಿಯಲ್ಲಿ ಬರುತ್ತಿರುವ ಬಗ್ಗೆ ಪ್ರಭಾಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಹುಬಲಿ ಸಿನಿಮಾ ಮೂಲಕ ಭಾರತ ಚಿತ್ರರಂಗದಲ್ಲಿ ಸದ್ದು ಮಾಡಿದ ನಟ ಪ್ರಭಾಸ್, ಒಟಿಟಿ ವೇದಿಕೆಗೆ ಪ್ರವೇಶಿಸಲು ನನಗೆ ಆತುರವಿಲ್ಲ. ಒಟಿಟಿ ಕಂಟೆಂಟ್ ಇರುವ ವಿವಿಧ ಪ್ರಾಜೆಕ್ಟ್ ಬಗ್ಗೆ ಈಗಾಗಲೇ ಹಲವು ನಿರ್ಮಾಪಕರು ಚರ್ಚಿಸಿದ್ದಾರೆ. ಆದರೆ ಸಿನಿಮಾ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಒಟಿಟಿ ಪ್ರವೇಶಿಸುವ ಯಾವುದೇ ಯೋಚನೆಯಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಚಿಂತಿಸುತ್ತೇನೆ. ಸಿನಿಮಾ ಥಿಯೇಟರ್ ಮತ್ತು ದೊಡ್ಡ ಪರದೆಯೇ ನನಗೆ ಇಷ್ಟ ಎಂದು ಪ್ರಭಾಸ್ ಒಲವು ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು