ಬುಧವಾರ, ಜೂನ್ 29, 2022
27 °C

‘ಸಲಾರ್‌’ ಚಿತ್ರೀಕರಣದ ವೇಳೆ ಅ‍ಪಘಾತ: ಶಸ್ತ್ರಚಿಕಿತ್ಸೆಗೆ ಒಳಗಾದ ನಟ ಪ್ರಭಾಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ‘ಬಾಹುಬಲಿ’ ಖ್ಯಾತಿಯ ತೆಲುಗು ನಟ ಪ್ರಭಾಸ್ ಅವರು ಸ್ಪೇನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. 

ಪ್ರಶಾಂತ್ ನೀಲ್‌ ನಿರ್ದೇಶನದ ‘ಸಲಾರ್‌’ ಚಿತ್ರದ ಚಿತ್ರೀಕರಣದ ವೇಳೆ ಪ್ರಭಾಸ್‌ ಅ‍ಪಘಾತಕ್ಕೀಡಾಗಿದ್ದು, ವೈದ್ಯರ ಸಲಹೆಯಂತೆ ಅವರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಪ್ರಭಾಸ್‌, ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್’ ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಚಿತ್ರವು ಹಣ ಗಳಿಕೆ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಬೇಸರಗೊಂಡಿರುವ ಪ್ರಭಾಸ್‌ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ

ವಾರದ ಹಿಂದೆ ಬಿಡುಗಡೆಯಾದ ಈ ಚಿತ್ರ ಇದುವರೆಗೆ ₹200 ಕೋಟಿ ಗಳಿಸಿದೆ. 

ಓದಿ...  ವಿಕ್ಕಿ ಕೌಶಲ್ ಕುಟುಂಬದೊಂದಿಗೆ ಕತ್ರಿನಾ ಹೋಳಿ ಸಂಭ್ರಮ: ಫೋಟೊ ವೈರಲ್

ರಾಧಾ ಕೃಷ್ಣ ಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃಷ್ಣಂರಾಜು, ಭಾಗ್ಯಶ್ರಿ, ಸಚಿನ್ ಖೇಡೇಕರ್, ಜಗಪತಿ ಬಾಬು ತಾರಾಂಗಣವಿದೆ. 

ಪ್ರಭಾಸ್, ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಾರೈಸಿದ್ದಾರೆ. 

‘ಸಲಾರ್‌’ ಚಿತ್ರದಲ್ಲಿ ಪ್ರಭಾಸ್, ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ‘ಆದಿಪುರುಷ್’ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದು, ‘ಪ್ರಾಜೆಕ್ಟ್ ಕೆ’, ‘ಸ್ಪಿರಿಟ್’, ‘ಮಾರುತಿ’ ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು