‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಸಮಾರಂಭ ಜೂನ್ 27ರಂದು ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ ವಿಭಾಗದಲ್ಲಿ ನಾಮನಿರ್ದೇಶನಗೊಂಡವರನ್ನು ಪರಿಚಯಿಸುವ ಸಮಯ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್ಸೈಟ್ ನೋಡಿ. https://www.prajavani.net/cinesamman/season3

ಮಿಥಿಲೇಷ್ ಎಡವಲತ್

‘ರೂಪಾಂತರ’ ಸಿನಿಮಾ ನಿರ್ದೇಶನಕ್ಕಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಎಂಬಿಎ ಪದವೀಧರರಾಗಿರುವ ಇವರು ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ ಸಿನಿ ಪಯಣದಲ್ಲಿ ಹೆಜ್ಜೆ ಹಾಕಿದವರು. ಕೇರಳದಿಂದ 2004ರಲ್ಲಿ ಬೆಂಗಳೂರಿಗೆ ಬಂದ ಇವರು ಕನ್ನಡ ಮತ್ತು ಮಲಯಾಳ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಾ ಕಿರುಚಿತ್ರಗಳಲ್ಲೂ ತೊಡಗಿಸಿಕೊಂಡವರು. ತಾವು ವಾಸಿಸುತ್ತಿರುವ ಬೆಂಗಳೂರನ್ನೇ ತಮ್ಮ ಮೊದಲ ಸಿನಿಮಾದ ವೇದಿಕೆಯಾಗಿಸಿದರು. ಬರವಣಿಗೆಯತ್ತ ಹೊರಳಿ ‘ರೂಪಾಂತರ’ ಕಥೆ ಬರೆದರು. ಇಂಗ್ಲಿಷ್ನಲ್ಲಿ ಇವರು ಬರೆದಿದ್ದ ಈ ಚಿತ್ರದ ಕಥೆಗೆ ನಟ ರಾಜ್ ಬಿ.ಶೆಟ್ಟಿ ಸಂಭಾಷಣೆ ಮತ್ತು ಹೆಚ್ಚುವರಿ ಚಿತ್ರಕಥೆ ಬರೆದಿದ್ದರು. ಬರವಣಿಗೆಯ ಶಕ್ತಿ ಪ್ರದರ್ಶಿಸಿದ್ದ ಈ ಸಿನಿಮಾವು ನಾಲ್ಕು ಕಥೆಗಳ ಗುಚ್ಛ. ಅದನ್ನು ಭಿನ್ನವಾಗಿ ಪೋಣಿಸಿ ಭಿನ್ನ ಮಾದರಿಯ ಸಿನಿಮಾವೊಂದನ್ನು ಪ್ರೇಕ್ಷಕರ ಎದುರಿಗೆ ಇರಿಸಿದ್ದರು.

ಶ್ರೀನಿಧಿ ಬೆಂಗಳೂರು

‘ಬ್ಲಿಂಕ್’ ಸಿನಿಮಾ ನಿರ್ದೇಶನಕ್ಕಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಈಗಷ್ಟೇ ಬೆರಗುಗಣ್ಣಿನಿಂದ ಸಿನಿಮಾ ಪ್ರಪಂಚವನ್ನು ನೋಡುತ್ತಿರುವ ಶ್ರೀನಿಧಿ ನಾಟಕಗಳ ಬರವಣಿಗೆಯ ಮೂಲಕ ಬಣ್ಣದ ಪ್ರಪಂಚಕ್ಕೆ ಹೆಜ್ಜೆ ಇಟ್ಟವರು. ಬೆಂಗಳೂರಿನಲ್ಲೇ ಬೆಳೆದ ಇವರಿಗೆ ಬಾಲ್ಯದಲ್ಲೇ ಚಿತ್ರರಂಗದ ಸೆಳೆತವಿತ್ತು. ರಂಗಭೂಮಿಯನ್ನು ಬದುಕಿನ ಭಾಗವಾಗಿಸಿದ್ದ ಇವರು 600ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ. ಅಭಿಜ್ಞಾ ರಂಗತಂಡ ಕಟ್ಟಿದ್ದಾರೆ. ಜೊತೆಗೆ ಪುಸ್ತಕ ಪ್ರೇಮಿಯೂ ಹೌದು. ಭಾರತದ ಮೊದಲ ಮ್ಯೂಸಿಕಲ್ ಸೈಫೈ ಥ್ರಿಲ್ಲರ್ ಸಿನಿಮಾವಾಗಿ ‘ಬ್ಲಿಂಕ್’ ಅನ್ನು ಪ್ರೇಕ್ಷಕರ ಎದುರಿಗಿಟ್ಟು ಪ್ರಶಂಸೆಗಿಟ್ಟಿಸಿಕೊಂಡವರು. ರಂಗಭೂಮಿ ಗೆಳೆಯರೇ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಟೈಂ ಟ್ರಾವೆಲ್ ಡ್ರಾಮಾ ಮೂಲಕ ತಮ್ಮೊಳಗಿನ ನಿರ್ದೇಶನದ ಸಾಮರ್ಥ್ಯವನ್ನು ಶ್ರೀನಿಧಿ ತೆರೆದಿಟ್ಟಿದ್ದರು. ಸಂಕಲನ, ಛಾಯಾಚಿತ್ರಗ್ರಹಣ ಹಾಗೂ ಸಂಗೀತದ ಹದವಾದ ಮಿಶ್ರಣದ ಮೂಲಕ ಭಿನ್ನವಾದ ಚಿತ್ರವನ್ನು ನೀಡಿದ್ದರು. ಸದ್ಯ ದೀಕ್ಷಿತ್ ಶೆಟ್ಟಿ ನಟನೆಯ ‘ವಿಡಿಯೊ’ ಎಂಬ ಸಿನಿಮಾವನ್ನು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ ಶ್ರೀನಿಧಿ.

ಸಂದೀಪ್ ಸುಂಕದ್

‘ಶಾಖಾಹಾರಿ’ ಸಿನಿಮಾದ ನಿರ್ದೇಶನಕ್ಕಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಶಿವಮೊಗ್ಗದ ಸಂದೀಪ್, ‘ಕಾಗುಣಿತ’ ಎಂಬ ಕಿರುಚಿತ್ರದಿಂದ ಈ ಬಣ್ಣದ ಲೋಕದ ಪಯಣ ಆರಂಭಿಸಿದರು. ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾಗಳ ಸ್ಕ್ರಿಪ್ಟ್ ಪುಸ್ತಕಗಳು ಕೈಸೇರಿದಾಗ ಸಿನಿಮಾ ಹುಚ್ಚು ಹತ್ತಿಸಿಕೊಂಡ ಇವರು ಸಿನಿಮಾ ಬರವಣಿಗೆಯತ್ತ ಮೊದಲ ಹೆಜ್ಜೆ ಇಟ್ಟಿದ್ದು ಇಲ್ಲಿಂದಲೇ. ತಮ್ಮ ಮೊದಲ ಸಿನಿಮಾದಲ್ಲೇ ನಟರಾದ ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಅವರಂಥ ಖ್ಯಾತ ನಟರಿಗೆ ನಿರ್ದೇಶನ ಮಾಡಿದವರು. ಚೊಚ್ಚಲ ಚಿತ್ರದಲ್ಲೇ ನಾಟಕದ ಒಂದೆಳೆಯನ್ನು ಹಿಡಿದು ಭಿನ್ನವಾದ ಒಂದು ಕಥಾಲೋಕವನ್ನು ಸೃಷ್ಟಿಸಿ ಜಿಹ್ವಾನಂದ ನೀಡಿದರು. ಆರಂಭಿಕ ಹೆಜ್ಜೆಯಲ್ಲೇ ಸಿದ್ಧಸೂತ್ರದಿಂದ ದೂರವಿದ್ದು, ಅಚ್ಚುಕಟ್ಟಾದ ಸಿನಿಮಾ ಕಟ್ಟಿ ನಿರ್ದೇಶನದ ಮೇಲಿನ ಬದ್ಧತೆ ತೋರಿದವರು. ಸದ್ಯ ಗೀತಾ ಶಿವರಾಜ್ಕುಮಾರ್ ನಿರ್ಮಾಣದ ಧೀರೆನ್ ನಟನೆಯ ‘ಪಬ್ಬಾರ್’ ಸಿನಿಮಾದ ಚಿತ್ರೀಕರಣದಲ್ಲಿ ಸಂದೀಪ್ ತೊಡಗಿಸಿಕೊಂಡಿದ್ದಾರೆ.

ಚಂದ್ರಜಿತ್ ಬೆಳ್ಯಪ್ಪ

‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ನಿರ್ದೇಶನಕ್ಕಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರ ಸೆವೆನ್ ಆಡ್ಸ್ ಚಿತ್ರಕಥಾ ವಿಭಾಗದಲ್ಲಿ ಗುರುತಿಸಿಕೊಂಡಿರುವ ಇವರು ‘ಕಿರಿಕ್ ಪಾರ್ಟಿ’ ಮತ್ತು ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ಚಿತ್ರಕಥೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ‘ಕಥಾಸಂಗಮ’ ಚಿತ್ರದ ‘ರೇನ್ಬೋ ಲ್ಯಾಂಡ್’ ಕಥೆಯನ್ನು ಇವರು ನಿರ್ದೇಶಿಸಿದ್ದಾರೆ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಇವರು ಬ್ಲಾಗ್ ಬರೆಯುವ ಹವ್ಯಾಸ ಹೊಂದಿದ್ದಾರೆ. ಈ ಬ್ಲಾಗ್ ಮೂಲಕವೇ ರಕ್ಷಿತ್ ಶೆಟ್ಟಿ ಅವರ ತೆಕ್ಕೆಗೆ ಬಿದ್ದವರು ಚಂದ್ರಜಿತ್. ‘ಇಬ್ಬನಿ..’ಮೂಲಕ ಚಂದ್ರಜಿತ್ ಸ್ವತಂತ್ರ ನಿರ್ದೇಶಕರಾದರು. ತಮ್ಮ ಮೊದಲ ಸಿನಿಮಾದಲ್ಲೇ ಒಂದು ಮ್ಯೂಸಿಕಲ್ ಲವ್ಸ್ಟೋರಿ ಕಟ್ಟಿಕೊಟ್ಟಿದ್ದ ಇವರು ದೃಶ್ಯಕಾವ್ಯ ಹೆಣೆದಿದ್ದರು. ಪ್ರೇಕ್ಷಕರನ್ನು ಭಾವನಾತ್ಮಕ ದೃಶ್ಯಗಳ ಮೂಲಕವೇ ಕಟ್ಟಿಹಾಕಿದವರು.

ರಾಘವೇಂದ್ರ ಎಂ.ನಾಯ್ಕ್

‘ಮಾರಿಗೋಲ್ಡ್’ ಚಿತ್ರದ ನಿರ್ದೇಶನಕ್ಕಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾರಂಗದಲ್ಲಷ್ಟೇ ಅಲ್ಲದೆ ಜಾಹೀರಾತು ಮತ್ತು ಸಾಕ್ಷ್ಯಚಿತ್ರಗಳನ್ನು ಇವರು ನಿರ್ದೇಶನ ಮಾಡಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನಲ್ಲಿ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ನಡೆಯುವ ಕಾಲ್ಪನಿಕ ಕಥೆಯನ್ನು ಪ್ರೇಕ್ಷಕರ ಎದುರಿಗೆ ಇಟ್ಟಿದ್ದ ಇವರು ದಿಗಂತ್ ಅವರಿಗೆ ಭಿನ್ನವಾದ ಒಂದು ಪಾತ್ರ ಬರೆದಿದ್ದರು.

ರಘುರಾಜ್ ಗೌಡ, ನಾಗರಾಜ್ ಮಲ್ಲಿಗೇನಹಳ್ಳಿ

‘ರಮೇಶ್–ಸುರೇಶ್’ ಸಿನಿಮಾ ನಿರ್ದೇಶನಕ್ಕಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ರಘುರಾಜ್ ಗೌರಿಬಿದನೂರಿನವರು. ‘ಪಾರ್ವತಿ ಪರಮೇಶ್ವರ’ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಇವರು ನಂತರದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಜೂನಿಯರ್ ಆರ್ಟಿಸ್ಟ್ ಆಗಿ ‘ದ್ಯಾವ್ರೇ’ ಸಿನಿಮಾದಲ್ಲಿ ಬಣ್ಣಹಚ್ಚಿದ್ದ ಇವರು ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಗಡ್ಡ ವಿಜಿಯವರ ಸಿನಿಮಾಗಳಲ್ಲಿ ಕೆಲಸ ಮಾಡಿದ ಇವರು ಬಳಿಕ ಸಿನಿಮಾ ನಿರ್ದೇಶನದತ್ತ ಆಸಕ್ತಿ ಹುಟ್ಟಿಸಿಕೊಂಡವರು. ನಾಗರಾಜ್ ಶಿವಮೊಗ್ಗದವರು. ರಂಗಭೂಮಿಯಲ್ಲಿ ಕಾರ್ಯನಿರ್ವಹಿಸಿದ ಅನುಭವವುಳ್ಳವರು. ಯಶ್ ರಾಜ್ ಅವರಿಗೆ ಸಿನಿಮಾ ಮಾಡಬೇಕು ಎಂದು ರಘು ಅಂದುಕೊಂಡಿದ್ದರು. ನಾಗರಾಜ್ ಅವರು ಬೆನಕ ಗುಬ್ಬಿಯವರಿಗೆ ಸಿನಿಮಾ ಮಾಡಬೇಕೆಂದಿದ್ದರು. ಇವರಿಬ್ಬರೂ ಜೊತೆಗೂಡಿ ಯಶ್–ಬೆನಕ ನಟನೆಯ ‘ರಮೇಶ್ ಸುರೇಶ್’ ತೆರೆಗೆ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.