ಗುರುವಾರ , ಏಪ್ರಿಲ್ 15, 2021
24 °C

ಕುಳಿತು ನೀರು ಕುಡಿಯಿರಿ..ನೀರು ಕುಡಿಯುವ ಕ್ರಮ ವಿವರಿಸಿದ ನಟಿ ಮಲೈಕಾ ಅರೋರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ಸೆಲೆಬ್ರಿಟಿಗಳು ಫಿಟ್‌ನೆಸ್‌ ವಿಷಯದಲ್ಲಿ ಸದಾ ಜಾಗೃತರಾಗಿರುತ್ತಾರೆ. ಡಯೆಟ್ ಹಾಗೂ ಫಿಟ್‌ನೆಸ್‌ ಕ್ರಮಗಳನ್ನು ಚಾಚೂ ತಪ್ಪುದೆ ಪಾಲಿಸುವ ಇವರು ವಯಸ್ಸಾದರೂ ತರುಣಿಯರಂತೆ ಕಾಣಿಸುತ್ತಾರೆ. ಬಾಲಿವುಡ್‌ ಸೆಲೆಬ್ರಿಟಿಗಳು ಫಿಟ್‌ನೆಸ್‌ ಮೇಲೆ ಹೆಚ್ಚು ಒಲವು ಹೊಂದಿರುವವರು ನಟಿ ಮಲೈಕಾ ಅರೋರಾ.

ಆಕೆಯ ವಯಸ್ಸು 46 ಎಂದರೆ ಯಾರೂ ನಂಬುವುದಿಲ್ಲ. 20ರ ತರುಣಿಯಂತೆ ಕಾಣುವ ಮಲೈಕಾಗೆ ಫಿಟ್‌ನೆಸ್‌ ಮೇಲೆ ಅಪಾರ ಒಲವು. ಮುಂಚಿನಿಂದಲೂ ಡಯೆಟ್ ಹಾಗೂ ಫಿಟ್‌ನೆಸ್‌ ವಿಷಯದಲ್ಲಿ ಈಕೆ ಸರಿಯಾದ ಕ್ರಮಗಳನ್ನು ಪಾಲಿಸುತ್ತಲೇ ಬಂದಿದ್ದಾರೆ. ಈಕೆ ಹೊಳೆಯುವ ಕಾಂತಿಯುತ ಚರ್ಮ ಹಾಗೂ ದೇಹ ರಚನೆಯೇ ಇದಕ್ಕೆ ಸಾಕ್ಷಿ. 

ಈ ವಯಸ್ಸಿನಲ್ಲೂ ಬಾಲಿವುಡ್‌ನ ಯಾವುದೇ ಎಳೆಯ ನಟಿಯರಿಗೂ ಕಮ್ಮಿ ಇಲ್ಲ ದೇಹಸೌಂದರ್ಯದ ಆಕೆಯದ್ದು. ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಸದಾ ಸಕ್ರಿಯರಾಗಿರುವ ಈಕೆ ವಿವಿಧ ಬಗೆಯ ಆಹಾರಕ್ರಮದ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ.  

ಈಕೆ ಇತ್ತೀಚೆಗೆ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ನೀರು ಕುಡಿಯವುದು ದೇಹಕ್ಕೆ ಉತ್ತಮ ಎಂಬುದು ಆದರೆ ನಾವು ನೀರು ಕುಡಿಯುವ ಕ್ರಮ ಸರಿಯಿಲ್ಲ ಎಂದಿದ್ದಾರೆ. ಜೊತೆಗೆ ನೀರು ಕುಡಿಯುವ ಸರಿಯಾದ ಕ್ರಮವನ್ನು ವಿವರಿಸಿದ್ದಾರೆ.  

ಡಯೆಟ್‌, ಫಿಟ್‌ನೆಸ್‌ ಕ್ರಮಗಳ ಬಗ್ಗೆ ನಿಮಿಷಗಳ ಕಾಲ ಮಾತನಾಡಿರುವ ಮಲ್ಲಿಕಾ ಒಂದು ಜನರು ಸಾಮಾನ್ಯ ವಿಷಯಗಳನ್ನು ಮರೆತು ಅಸಾಮಾನ್ಯಗಳ ಬಗ್ಗೆ ಚಿಂತಿಸುತ್ತಿದ್ದಾರೆ, ಜೊತೆಗೆ ಅದನ್ನೇ ಪಾಲಿಸುತ್ತಿದ್ದಾರೆ. ಜೊತೆಗೆ ಮೂಲ ವಿಷಯಗಳನ್ನು ಮರೆಯುತ್ತಿದ್ದಾರೆ ಎಂದಿದ್ದಾರೆ. 

‘ನಾವು ಫಿಟ್ ಆಗಿರಲು ಪ್ರತಿದಿನ ಹೊಸ ಹೊಸ ವ್ಯಾಯಾಮಗಳನ್ನು ಅನುಸರಿಸುತ್ತೇವೆ. ಹೊಸ ಹೊಸ ಫಿಟ್‌ನೆಸ್‌ ಕ್ರಮಗಳನ್ನು ಪ್ರಯತ್ನಿಸುತ್ತೇವೆ. ಮಾರುಕಟ್ಟೆಯಲ್ಲಿ ಸಿಗುವ ಸೂಪರ್‌ಪುಡ್‌ಗಳನ್ನು ತಿನ್ನುತ್ತೇವೆ. ಏನ್ನನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಎಂಬುದನ್ನೂ ತಿಳಿಯಲು ಯುಟ್ಯೂಬ್ ಚಾನೆಲ್‌ಗಳ ಮೊರೆ ಹೋಗುತ್ತೇವೆ. ಆದರೆ ಈ ಎಲ್ಲದರ ನಡುವೆ ಮೂಲ ವಿಷಯವನ್ನೇ ನಾವು ಮರೆತು ಬಿಡುತ್ತೇವೆ’ ಎಂದು ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊ ಜೊತೆ ಬರೆದುಕೊಂಡಿದ್ದರು. 

ಜೊತೆಗೆ ಫಿಟ್‌ನೆಸ್‌ ಕಾಪಾಡಿಕೊಳ್ಳಲು ನೀರು ಅತ್ಯಂತ ಮುಖ್ಯ. ಡಯೆಟ್‌ನಲ್ಲಿ ನೀರು ಕುಡಿಯುವುದೇ ಮೂಲ ಕ್ರಮ. ಆದರೆ ನೀರು ಕುಡಿಯುವುದಕ್ಕೆ ಒಂದು ಸರಿಯಾದ ಕ್ರಮವಿದೆ. ಸಾಮಾನ್ಯವಾಗಿ ನಾವು ಆ ಕ್ರಮವನ್ನು ಅನುಸರಿಸುವುದಿಲ್ಲ. ನಾನು ಇಲ್ಲಿ ನೀರು ಕುಡಿಯುವ ಸರಿಯಾದ ಕ್ರಮದ ಬಗ್ಗೆ ತಿಳಿಸಿದ್ದೇನೆ ಎಂದು ಹೇಳಿದ್ದರು.

ನಿಂತುಕೊಂಡು ನೀರು ಕುಡಿಯಬಾರದು
ಹೊರಗಿನಿಂದ ಮನೆಯ ಒಳಗೆ ಬಂದಾಕ್ಷಣ ನೀರು ಕುಡಿಯುವುದು ನಮ್ಮೆಲ್ಲರ ಅಭ್ಯಾಸ. ಆದರೆ ಆ ಸಮಯದಲ್ಲಿ ನಾವು ಸರಿಯಾದ ಕ್ರಮದಲ್ಲಿ ನೀರು ಕುಡಿಯುತ್ತಿದ್ದೀವಾ, ಇಲ್ಲವಾ ಎನ್ನುವುದರ ಬಗ್ಗೆ ನಾವು ಚಿಂತಿಸುವುದಿಲ್ಲ. ಆದರೆ ವಿಜ್ಞಾನದ ಪ್ರಕಾರ ನಿಂತುಕೊಂಡು ನೀರು ಕುಡಿದರೆ ನೀರಿನಿಂದ ಸಿಗುವ ಪೌಷ್ಟಿಕಾಂಶ ನಮ್ಮ ದೇಹದ ಎಲ್ಲಾ ಭಾಗವನ್ನು ಸೇರುವುದಿಲ್ಲ. ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಆ ಕಾರಣಕ್ಕೆ ಸರಿಯಾದ ಕ್ರಮದಲ್ಲೇ ನೀರು ಕುಡಿಯಬೇಕು. ಜೊತೆಗೆ ಆಯುರ್ವೇದದಲ್ಲೂ ಕುಳಿತು, ಒಂದೊಂದೇ ಗುಟುಕು ನೀರು ಕುಡಿಯುವುದು ಸರಿಯಾದ ಕ್ರಮ ಎಂದಿದೆ.

ನಿಂತುಕೊಂಡು ನೀರು ಕುಡಿದರೆ ದೇಹದ ಎಲ್ಲಾ ಅಂಗಾಂಶಗಳಿಗೂ ನೇರವಾಗಿ ನೀರು ತಲುಪುವುದಿಲ್ಲ. ಇದರಿಂದ ದೇಹದಲ್ಲಿ ಟಾಕ್ಸಿನ್‌ ಅಂಶ ಹಾಗೇ ಉಳಿಯುತ್ತದೆ. ಇದರಿಂದ ಮೂತ್ರಕೋಶದಲ್ಲಿ ಕಲ್ಲು ಬೆಳೆಯುವ ಸಾಧ್ಯತೆಯೂ ಹೆಚ್ಚು. ಸುಮ್ಮನೆ ಬಾಯಾರಿತು ಎಂದು ನೀರು ಕುಡಿಯುವಾಗಲೂ ಕುಳಿತು ಒಂದೊಂದೇ ಸಿಪ್‌ ನೀರು ಕುಡಿಯುವುದು ಉತ್ತಮ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು