ಸೋಮವಾರ, ಮಾರ್ಚ್ 30, 2020
19 °C

ಜೇಮ್ಸ್‌ ಪೋಸ್ಟರ್‌: ಮೆಷಿನ್‌ ಗನ್‌ ಹಿಡಿದು ಬಂದ ಪುನೀತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಪುನೀತ್‌ ರಾಜ್‌ಕುಮಾರ್‌ ಜನ್ಮ ದಿನದ ಪ್ರಯುಕ್ತ ‘ಜೇಮ್ಸ್‌’ ಚಿತ್ರ ತಂಡವು ವಿಶೇಷ ರೇಸಿ ಮೋಷನ್‌ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಬಿಡುಗಡೆ ಮಾಡಿದೆ.

‘ಕಷ್ಟ ಬಂದಾಗ ಹೆದುರ್ಕೋಳೊರು ಕಾಮನ್‌ ಎಲ್ಲನೂ ಎದುರಿಸಿ ಮುಂದೆ ನಿಲ್ಲೋನು ನಂಬರ್‌ 1’ ಒಕ್ಕಣೆಯಿಂದ ಈ ಮೋಷನ್‌ ಪೋಸ್ಟರ್‌ ಶುರುವಾಗುತ್ತದೆ. ಕಾರಿನಲ್ಲಿ ಟ್ರಕ್‌ವೊಂದನ್ನು ಬೆನ್ನಟ್ಟಿ ಹೋಗುವ ಜೇಮ್ಸ್‌ ಪಾತ್ರಧಾರಿ ಪುನೀತ್‌ ರಾಜ್‌ಕುಮಾರ್‌, ಅದನ್ನು ಸೇತುವೆ ಮೇಲೆ ಅಡ್ಡಗಟ್ಟಿ ಮಿಷನ್‌ಗನ್ನಿನಿಂದ ಭಸ್ಮ ಮಾಡುವ ದೃಶ್ಯ ಸಿನಿ ರಸಿಕರಿಗೆ ರೋಮಾಂಚನ ನೀಡುವಂತಿದೆ. ಈ ಮೋಷನ್‌ ಪೋಸ್ಟರ್‌ ಬಿಡುಗಡೆಯಾದ 11 ನಿಮಿಷಗಳಲ್ಲಿ 27 ಸಾವಿರಕ್ಕೂ ಹೆಚ್ಚು ಮಂದಿ ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡಿದ್ದರು.

‘ಬಹದ್ದೂರ್‌’ ಖ್ಯಾತಿಯ ಚೇತನ್‌ ಕುಮಾರ್‌ ‘ಜೇಮ್ಸ್’ಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಜೇಮ್ಸ್‌ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವೂ ಚೇತನ್‌ ಅವರೇ ನಿಭಾಯಿಸಿದ್ದಾರೆ.

ಜೇಮ್ಸ್ ಚಿತ್ರದಲ್ಲಿ ಪುನೀತ್‌ಗೆ ತೆಲುಗಿನ ನಟಿ ನಿಧಿ ಅಗರ್‌ವಾಲ್‌ ಅಥವಾ ಬಹುಭಾಷಾ ತಾರೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಬಹುದೆಂಬ ಮಾತುಗಳು ಕೇಳಿಬಂದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು