ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ 75ನೇ ವರ್ಷದ ಜನ್ಮ ದಿನ ಹಾಗೂ 50ನೇ ವರ್ಷದ ಸಿನಿ ಪ್ರಯಣವನ್ನು ಪೂರೈಸಿದ್ದಾರೆ. ಇದೇ ಸಂದರ್ಭದಲ್ಲಿ ತಲೈವಾ ನಟನೆಯ ಸೂಪರ್ಹಿಟ್ ಸಿನಿಮಾ ಪಡಿಯಪ್ಪ ಇಂದು ಮರು ಬಿಡುಗಡೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ರಜನಿಕಾಂತ್ ಅವರ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ. ರಜನಿಕಾಂತ್ ತಮಿಳು ಮಾತ್ರವಲ್ಲದೇ ಕನ್ನಡ, ಹಿಂದಿ, ತೆಲುಗು ಸೇರಿದಂತೆ ಇತರೆ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ.
.ಮರು ಬಿಡುಗಡೆಯಾಗುತ್ತಿದೆ ರಜನಿ ಸೂಪರ್ಹಿಟ್ ಸಿನಿಮಾ ‘ಪಡಿಯಪ್ಪ’: ವಿಶೇಷ ಏನಿದೆ?.ಹುಟ್ಟುಹಬ್ಬದ ಸಂಭ್ರಮದಲ್ಲಿ ಸೂಪರ್ಸ್ಟಾರ್: ತಲೈವಾ ನಟನೆಯ ಪಡಿಯಪ್ಪ ಮರು ಬಿಡುಗಡೆ.
ಇನ್ನು, ರಜನಿಕಾಂತ್ ಅವರ ನಿಜವಾದ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಚಿತ್ರರಂಗಕ್ಕೆ ಪ್ರವೇಶಿಸಿದ ನಂತರ ನಿರ್ದೇಶಕ ಕೆ. ಬಾಲಚಂದರ್ ಅವರು ಅವರಿಗೆ ‘ರಜನಿಕಾಂತ್’ ಎಂದು ಹೆಸರಿಟ್ಟರು. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕವಾಡ್ ಆಗಿತ್ತು.

ರಜನಿಕಾಂತ್ ಅವರು ಡಾ. ರಾಜಕುಮಾರ್ ಮೇಲೆ ಅಪಾರ ಅಭಿಮಾನ ಹೊಂದಿದ್ದರು. ರಜನಿ ಕನ್ನಡದ ದಿಗ್ಗಜ ನಟರಾದ ವಿಷ್ಣುವರ್ಧನ್ ಮತ್ತು ಅಂಬರೀಶ್ ಆಪ್ತ ಸ್ನೇಹಿತರಾಗಿದ್ದರು. ರಜನಿಕಾಂತ್ ಅವರು ಕನ್ನಡದಲ್ಲಿ ನಟಿಸಿದ್ದಾರೆ.

ರಜನಿ ನಟನೆಯ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ

ಕಥಾಸಂಗಮ 1976

ಬಾಳು ಜೇನು

ಒಂದು ಪ್ರೇಮದ ಕಥೆ

ಸಹೋದರರ ಸವಾಲ್

ಕುಂಕುಮ ರಕ್ಷೆ

ಗಲಾಟೆ ಸಂಸಾರ

ಕಿಲಾಡಿ ಕಿಟ್ಟು

ಮಾತು ತಪ್ಪದ ಮಗ

ತಪ್ಪಿದ ತಾಳ

ಪ್ರಿಯಾ

ಘರ್ಜನೆ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.