ಸೋಮವಾರ, ಫೆಬ್ರವರಿ 17, 2020
16 °C

VIDEO: ಕೊರೊನಾ ವೈರಸ್​ ಕೊಲ್ಲಲು ಚೀನಾಗೆ ತೆರಳಿರುವ ನಟಿ ರಾಖಿ ಸಾವಂತ್​

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಚಿತ್ರವಾದ ವಿಡಿಯೊಗಳು, ವಿವಾದಗಳ ಮೂಲಕ ಪದೇ ಪದೇ ಸುದ್ದಿಯಾಗುತ್ತಿರುವ ಬಾಲಿವುಡ್‌ ನಟಿ ರಾಖಿ ಸಾವಂತ್‌ ಇದೀಗ ಕೊರೊನಾ ವೈರಸ್‌ ನಾಶಪಡಿಸಲು ಚೀನಾಗೆ ತೆರಳಿದ್ದಾರೆ. ಈ ಕುರಿತು ಅವರು ಮಾಡಿರುವ ಸೆಲ್ಫೀ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಹೌದು, ರಾಖಿ ಸಾವಂತ್‌ ಕೊರೊನಾ ವೈರಸ್‌ ಕೊಲ್ಲಲು ಚೀನಾಗೆ ತೆರಳಿದ್ದಾರೆ. ಇದಕ್ಕಾಗಿ ಅವರು ನಾಶದಿಂದ ಔಷಧಿಗಳನ್ನು ತರಿಸಿಕೊಂಡಿದ್ದು ಈ ಕಾರ್ಯಾಚರಣೆ ಯಶಸ್ವಿಯಾಗಲು ಜನರು ಪ್ರಾರ್ಥಿಸಬೇಕು ಎಂದು ಸೆಲ್ಫೀ ವಿಡಿಯೊದಲ್ಲಿ ಮನವಿ ಮಾಡಿದ್ದಾರೆ. 

ಸೆಲ್ಫೀ ವಿಡಿಯೊದಲ್ಲಿ ಏನಿದೆ? 

ಚೀನಾಗೆ ಪ್ರಯಾಣಿಸುವ ಸಂದರ್ಭದಲ್ಲಿ ರಾಖಿ ಸಾವಂತ್‌  ಸೆಲ್ಫೀ ವಿಡಿಯೊ ಮಾಡಿದ್ದಾರೆ. ಪಕ್ಕದಲ್ಲಿ ಕುಳಿತಿರುವ ಪ್ರಯಾಣಿಕರನ್ನು ಮಾತನಾಡಿಸುತ್ತ ಚೀನಾದಲ್ಲಿ ಕೊರೊನಾ ವೈರಸ್‌ ಕೊಲ್ಲುವುದಾಗಿ ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by Rakhi Sawant (@rakhisawant2511) on

ವಿಮಾನದಲ್ಲಿ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ವಿಚ್ ಆಫ್ ಮಾಡಿ ಅಂತ ಹೇಳಿದ ಬಳಿಕ ಸೆಲ್ಫೀ ವಿಡಿಯೊದಲ್ಲಿ ಮಾತನಾಡಿದ ರಾಖಿ ಸಾವಂತ್, ಮೋದೀಜೀ, ನಾನು ಚೈನಾಕ್ಕೆ ಹೋಗುತ್ತಿದ್ದೇನೆ, ವೈರಸ್ಸನ್ನು ಕೊಂದು ಮುಗಿಸಿಯೇ ಬರುತ್ತೇನೆ, ನೀವು ನನಗಾಗಿ ಪ್ರಾರ್ಥಿಸಿ ಎಂದು ಹೇಳಿದ್ದಾರೆ.

ಇನ್ನು ಹೆಚ್ಚಿನ ಸಾವು ಸಂಭವಿಸುವುದಿಲ್ಲ, ವೈರಸ್ ಇರೋದಿಲ್ಲ ಯಾಕೆಂದರೆ ನಾನು ನಾಸಾದಿಂದ ಔಷಧಿ ತರಿಸಿಕೊಂಡಿದ್ದೇನೆ. ವಿಮಾನದೊಳಗೆ ಉಸಿರಾಡಬಹುದು, ಆದರೆ ಚೈನಾಕ್ಕೆ ಇಳಿದ ಬಳಿಕ ಉಸಿರಾಡುವುದು ಸಾಧ್ಯವಿಲ್ಲ ಎಂದಿದ್ದಾರೆ.

ಚೀನಾಕ್ಕೆ ಬಂದಿಳಿದ ಬಳಿಕವೂ ವಿಡಿಯೊ ಮಾಡಿರುವ ರಾಖಿ ಸಾವಂತ್‌, ನಾನು ಚೈನೀಸ್ ಕ್ಯಾಪ್ ಧರಿಸಿದ್ದೇನೆ, ಚೈನೀಸ್ ಜನರಂತೆಯೇ ಕಾಣಿಸುತ್ತಿದ್ದೇನೆ. ಚಿಣಿ ಮಿಣಿ ಚಾಂವ್ ಚಾಂವ್, ವೈರಸ್ ಕೋ ಖಾಂವ್ ಖಾಂವ್ ಎನ್ನುತ್ತಾ, ಮುಖಗವಸು ಧರಿಸಿದ ಚೀನಾ ಜನರನ್ನುಳ್ಳ ವಿಡಿಯೊ ಕ್ಲಿಪ್ಪಿಂಗ್ ತೋರಿಸುತ್ತಾರೆ.

ವಿಡಿಯೊದಲ್ಲಿ ರಾಖಿ ಸಾವಂತ್‌ ಕಿತ್ತಳೆ ಬಣ್ಣದ ಬಟ್ಟೆ ತೊಟ್ಟಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಒಂದು ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. 

ಚೀನಾದಲ್ಲಿ ಕೊರೊನಾ ವೈರಸ್​ನಿಂದಾಗಿ 500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು