ಸೋಮವಾರ, ಡಿಸೆಂಬರ್ 6, 2021
26 °C

'ಗರುಡ ಗಮನ ವೃಷಭ ವಾಹನ' ಚಿತ್ರತಂಡವನ್ನು ಶ್ಲಾಘಿಸಿದ ರಕ್ಷಿತ್‌ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಚಿತ್ರ ತಂಡವನ್ನು ಮತ್ತು ನಿರ್ಮಾಪಕರನ್ನು ಹೃದಯಸ್ಪರ್ಶಿಯಾಗಿ ಶ್ಲಾಘಿಸಿದ್ದಾರೆ. ಪರಂವಾ ಸ್ಟುಡಿಯೋಸ್‌ ಮೂಲಕ ಇಂತಹ ಸುಂದರ ಕಲಾಕೃತಿಯನ್ನು ಪರಿಚಯಿಸುವ ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

'ಚಿತ್ರ ನಿರ್ಮಾಪಕರಾದ ರವಿ ರೈ ಕಳಸ ಮತ್ತು ವಚನ್‌ ಶೆಟ್ಟಿ, ಕಾಫಿ ಗ್ಯಾಂಗ್‌ ಸ್ಟುಡಿಯೊದ ವಿಕಾಸ್‌ ಮತ್ತು ಶ್ರೀಕಾಂತ್‌, ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಮತ್ತು ತಂಡಕ್ಕೆ, ಈ ಸಿನಿಮಾವನ್ನು ತಯಾರಿಸಿದ ಲೈಟರ್‌ ಬುದ್ಧ ಫಿಲ್ಮ್ಸ್‌ಗೆ ಹೃದಯಸ್ಪರ್ಶಿ ಅಭಿನಂದನೆಗಳು. ಇಂತಹ ಸುಂದರ ಕಲೆಯನ್ನು ಪರಂವಾ ಸ್ಟುಡಿಯೋಸ್‌ ಮೂಲಕ ಪರಿಚಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು' ಎಂದು ರಕ್ಷಿತ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ.

ಅತ್ಯುತ್ತಮ ಸಿನಿಮಾದ ಭಾಗವಾಗಿರುವುದಕ್ಕೆ ರಿಷಭ್‌ ಶೆಟ್ಟಿ ಅವರಿಗೆ, ತಮ್ಮ ಜೊತೆ ಸಿನಿ ಪಯಾಣ ಬೆಳೆಸಿದ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ಅವರಿಗೆ, ಚಿತ್ರವನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ, ವೀಕ್ಷಕರಿಗೆ ರಕ್ಷಿತ್‌ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.

ರಾಜ್‌ ಬಿ ಶೆಟ್ಟಿ ಅವರನ್ನು 'ದಿ ಬೀಸ್ಟ್‌' ಎಂದು ಕರೆದಿರುವ ರಕ್ಷಿತ್‌ ಶೆಟ್ಟಿ, ಈರೆಗ್‌ ದಾದಾ ಪನ್ಪಿನಿ? (ನಿಮಗೆ ಏನೆಂದು ಹೇಳುವುದು?) ಯು ಆರ್‌ ದಿ ಬೆಸ್ಟ್‌. ಲವ್‌ ಯು ಸಹೋದರ ಎಂದು ರಕ್ಷಿತ್‌ ಶೆಟ್ಟಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು