ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾಸ್ತ್ರ: ಮಹಾಕಾಲ ದೇವಸ್ಥಾನದ ಸಂದ್ಯಾ ಪೂಜೆ ರದ್ದುಗೊಳಿಸಿದ ರಣಬೀರ್–ಆಲಿಯಾ

ರಣಬೀರ್ ವಿರುದ್ಧ ಉಜ್ಜೈನಿಯಲ್ಲಿ ಪ್ರತಿಭಟನೆ
Last Updated 7 ಸೆಪ್ಟೆಂಬರ್ 2022, 10:12 IST
ಅಕ್ಷರ ಗಾತ್ರ

ಉಜ್ಜೈನಿ:ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್‌ ಅಭಿನಯದ ಬಹುನಿರೀಕ್ಷಿತ ‘ಬ್ರಹ್ಮಾಸ್ತ್ರ– ಭಾಗ 1’ ಸಿನಿಮಾ ಇದೇ ಶುಕ್ರವಾರ (ಸೆ.9)ಬಿಡುಗಡೆಯಾಗಲಿದೆ.

ಬ್ರಹ್ಮಾಸ್ತ್ರ ಬಿಡುಗಡೆ ಅಂಗವಾಗಿ ಬುಧವಾರ ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಪ್ರಸಿದ್ಧ ಮಹಾಕಾಲದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಲು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್‌ ನಿರ್ಧರಿಸಿದ್ದರು.

ಆದರೆ, ರಣಬೀರ್ ಹಿಂದೂ ವಿರೋಧಿ ಎಂದು ಉಜ್ಜೈನಿಯ ಭಜರಂಗದಳ ಹಾಗೂ ಹಿಂದೂಪರ ಕಾರ್ಯಕರ್ತರು ರಣಬೀರ್ ಹಾಗೂ ಆಲಿಯಾ ಅವರದೇಗುಲ ಪ್ರವೇಶ ನಿರಾಕರಿಸಿ ಪ್ರತಿಭಟನೆ ನಡೆಸಿದ್ದರು.

ಇದೀಗ ಭದ್ರತೆ ಕಾರಣದಿಂದ ರಣಬೀರ್ ಹಾಗೂ ಆಲಿಯಾ ಇಂದು ಸಂಜೆ ಮಹಾಕಾಲ ದೇವಸ್ಥಾನದಲ್ಲಿ ನಡೆಯಬೇಕಿದ್ದ ಸಂದ್ಯಾ ಪೂಜಾ ಕಾರ್ಯಕ್ರಮದಲ್ಲಿ ಬಾಗವಹಿಸುವುದನ್ನು ರದ್ದುಗೊಳಿಸಿ ವಾಪಸ್ ಮುಂಬೈಗೆ ತೆರಳಿದ್ದಾರೆ.

ಬುಧವಾರ ಬೆಳಿಗ್ಗೆ ಬಜರಂಗ ದಳ ಕಾರ್ಯಕರ್ತರು ದೇಗುಲ ಪ್ರವೇಶ ನಿರಾಕರಿಸಿದ್ದಾರೆ. ಅಲ್ಲದೆ, ರಣಬೀರ್ ಮತ್ತು ಆಲಿಯಾ ಸ್ಥಳಕ್ಕೆ ಬರುತ್ತಿದ್ದಂತೆ ‘ಜೈ ಶ್ರೀರಾಮ್‘ ಘೋಷಣೆ ಕೂಗಿದ್ದರು.

ರಣಬೀರ್ ಅವರುಸಂದರ್ಶನವೊಂದರಲ್ಲಿ ಗೋಮಾಂಸ ತಿನ್ನಲು ನನಗೆ ಬಲು ಇಷ್ಟ ಎಂದು ಹೇಳಿಕೊಂಡಿದ್ದರು. ಇದೀಗ ಅವರು ಶಿವನ ಮಹಿಮೆ ಸಾರುವ ಬ್ರಹ್ಮಾಸ್ತ್ರ ಎಂಬ ಸಿನಿಮಾದಲ್ಲಿ ನಟಿಸಿದ್ದು ಹಾಗೂ ಅವರು ಚಿತ್ರದ ದೃಶ್ಯವೊಂದರಲ್ಲಿ ಕಾಲಿಗೆ ಶೂ ಹಾಕಿಕೊಂಡು ಘಂಟೆ ಬಾರಿಸಿಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಇನ್ನು ಮಹಾಕಾಲ ದೇವಸ್ಥಾನದ ಬಳಿಬಜರಂಗದಳದವರ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ಮಾಡಿದರೂ, ಕಾರ್ಯಕರ್ತರು ಸ್ಥಳದಿಂದ ತೆರಳದೇ ಪ್ರತಿಭಟಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದಚಿತ್ರದ ನಿರ್ದೇಶಕ ಆಯನ್ ಮುಖರ್ಜಿ ಒಬ್ಬರೇ ದೇವಸ್ಥಾನಕ್ಕೆ ತೆರಳಿ ಬೆಳಿಗ್ಗೆ ಪೂಜೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT