ಸೋಮವಾರ, ಮೇ 17, 2021
23 °C
ರಣಬೀರ್‌, ಕೊಹ್ಲಿ ಯಾರು ಒಳ್ಳೆಯ ಫೋಟೊಗ್ರಾಫರ್?

‘ಸನ್‌ ಕಿಸ್‌‘ ಫೋಟೊ ಹಂಚಿಕೊಂಡ ಆಲಿಯಾ, ಅನುಷ್ಕಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊರಗೆ ಓಡಾಡಿಕೊಂಡು, ಕಾಡು ನದಿ ಅಂತ ಪ್ರಕೃತಿ ಸೌಂದರ್ಯ ಸವಿಯಲು ಸಾಧ್ಯವಾಗದೇ ಲಾಕ್‌ಡೌನ್‌ ಕಾರಣದಿಂದಾಗಿ ಕೈಕಾಲು ಕಟ್ಟಿದಂತೆ ಕೂತಿರುವ ಬಾಲಿವುಡ್‌ ಮಂದಿ, ತಮ್ಮ ಬಾಲ್ಕನಿಯಲ್ಲೇ ಸೂರ್ಯೋದಯ ನೋಡಿ ರೋಮಾಂಚನಗೊಳ್ಳುತ್ತಿದ್ದಾರೆ. 

ಈ ಸೂರ್ಯೋದಯದ ಸವಿಯನ್ನು ‘ಸನ್‌ ಕಿಸ್‌‘ ಎಂದೇ ಬಣ್ಣಿಸುವ ಬಾಲಿವುಡ್‌ ಮುಂದೆ,  ತಮ್ಮ ’ಸನ್‌ ಕಿಸ್‌‘ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೇಕಪ್ ಇಲ್ಲದೆ, ಮನೆಯಲ್ಲೇ ವರ್ಕೌಟ್‌ ಮಾಡಿಕೊಂಡು ಸೌಂದರ್ಯ ಕಾಪಾಡಿಕೊಳ್ಳುತ್ತಾ, ಹೊಳೆಯುವ ಮುಖವನ್ನು ತೋರಿದವರಲ್ಲಿ ಅನುಷ್ಕಾ ಹಾಗೂ ಆಲಿಯಾ ಮೊದಲಿಗರು. 

ಮನೆಯ ಬಾಲ್ಕನಿಯಲ್ಲಿ ಕೂತು, ಹೊಳೆಯುವ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಕೂತ ಆಲಿಯಾ ಭಟ್‌ ಫೋಟೊವನ್ನು ಗೆಳೆಯ ರಣಬೀರ್‌ ಕಪೂರ್‌ ಕ್ಲಿಕ್‌ ಮಾಡಿದ್ದಾರೆ. ಹಾಗೇ ಸೂರ್ಯೋದಯದ ಖುಷಿಯಲ್ಲಿ ಕೂದಲು ಹಾರಾಡಿಸಿಕೊಂಡು ನಗುತ್ತಿರುವ ಅನುಷ್ಕಾ ಅವರ ಫೋಟೊವನ್ನು ಪತಿ ವಿರಾಟ್‌ ಕೊಹ್ಲಿ ಸೆರೆಹಿಡಿದ್ದಾರೆ. 

ಇವರಿಬ್ಬರ ಅಭಿಮಾನಿಗಳು ಈ ಎರಡೂ ಫೋಟೊಗಳನ್ನು ಇಟ್ಟುಕೊಂಡು, ರಣಬೀರ್‌ ಹಾಗೂ ಕೊಹ್ಲಿ ನಡುವೆ ಯಾರು ಒಳ್ಳೆಯ ಫೋಟೊಗ್ರಾಫರ್‌ ವೋಟ್‌ ಮಾಡಿ ಎಂದು ಟ್ರೆಂಡ್‌ ಮಾಡುತ್ತಿದ್ದಾರೆ. ಆಲಿಯಾ ಹಾಗೂ ಅನುಷ್ಕಾ ಮುದ್ದಾದ ಮುಖಗಳಿಂದ ಈ ಫೋಟೊಗಳು ಮತ್ತಷ್ಟು ವೈರಲ್ ಆಗಿವೆ. ಅಭಿಮಾನಿಗಳು ಇನ್‌ಸ್ಟಾ ಪೂಲ್‌ ಕ್ರಿಯೇಟ್‌ ಮಾಡಿ ಮತಹಾಕುವಂತೆ ಕೋರುತ್ತಿದ್ದಾರೆ.

ಆಲಿಯಾ ’ರಣಬೀರ್‌ ನನ್ನ ಫೇವ್ರೆಟ್‌ ಫೋಟೊಗ್ರಾಫರ್‌‘ ಎಂದಿದ್ದಾರೆ. ಅನುಷ್ಕಾ ಎಲ್ಲೇ ಹೋದರೂ ಪತಿ ವಿರಾಟ್‌ ಕೋಹ್ಲಿನೇ ಫೋಟೊಗ್ರಾಫರ್ ಎಂದು ಬರೆದುಕೊಂಡಿದ್ದಾರೆ‌. ಇವರಿಬ್ಬರ ಅಭಿಮಾನಿಗಳು ಮಾತ್ರ ಯಾರು ಬೆಸ್ಟ್‌ ಫೋಟೊಗ್ರಾಫರ್‌ ಎಂದು ಘೋಷಿಸುವ ಉಮೇದಿನಲ್ಲಿ ಇದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು