ಸುಶಾಂತ್ ಸಿಂಗ್ ರಜಪೂತ್ ಸಾವಿನ ಒಂದು ತಿಂಗಳ ಬಳಿಕ ಗೆಳತಿ ರಿಯಾ ಚಕ್ರವರ್ತಿ ಸುಶಾಂತ್ ನೆನಪಿನಲ್ಲಿ ಪತ್ರವೊಂದನ್ನು ಬರೆದಿದ್ದಾರೆ. ಸುಶಾಂತ್ ಜೊತೆ ಆತ್ಮೀಯವಾಗಿರುವ ಫೋಟೊವನ್ನು ಇನ್ಸ್ಟಾಗ್ರಾಂನಲ್ಲಿಹಂಚಿಕೊಂಡಿರುವ ರಿಯಾಪತ್ರದ ಸಾರಾಂಶ ಹೀಗಿದೆ:

ನಾನು ಇಂದಿಗೂ ನನ್ನ ಭಾವನೆಗಳನ್ನು ಎದುರಿಸಲು ಹೆಣಗಾಡುತ್ತಿದ್ದೇನೆ. ನನ್ನ ಹೃದಯದಲ್ಲಿ ನೋವು ಮಡುಗಟ್ಟಿದೆ. ನೀನು ನನಗೆ ಪ್ರೀತಿಯ ಮೇಲೆ ನಂಬಿಕೆ ಹುಟ್ಟುವಂತೆ ಮಾಡಿದವನು, ಪ್ರೀತಿಯ ಶಕ್ತಿಯ ಅರಿವು ಮೂಡಿಸಿದವನು. ಒಂದು ಗಣಿತದ ಸೂತ್ರದೊಂದಿಗೆ ಬದುಕು ಎಂದರೆ ಏನು ಎಂಬುದನ್ನು ಸುಲಭವಾಗಿ ಅರ್ಥ ಮಾಡಿಸಿದವನು ನೀನು. ಪ್ರಾಮಿಸ್, ನಾನು ಪ್ರತಿದಿನ, ಪ್ರತಿಕ್ಷಣ ನಿನ್ನಿಂದ ಕಲಿಯುತ್ತಿದೆ. ನೀನು ನನ್ನೊಂದಿಗೆ ಈ ಪ್ರಪಂಚದಲ್ಲಿ ಇಲ್ಲ ಎಂಬುದನ್ನು ನಾನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ.

ನನಗೆ ಗೊತ್ತು ನೀನು ಈಗ ಅತೀ ಹೆಚ್ಚು ಶಾಂತಿ ಸಿಗುವ ಜಾಗದಲ್ಲಿದ್ದೀಯಾ. ಚಂದ್ರ, ನಕ್ಷತ್ರ ಹಾಗೂ ಆಕಾಶಕಾಯಗಳು ಒಬ್ಬ ‘ಶೇಷ್ಠ ವ್ಯಕ್ತಿ’ಯನ್ನು ಕೈ ಚಾಚಿ ಸ್ವಾಗತಿಸಿರಬಹುದು.

ಸಂಪೂರ್ಣ ಸಂತೋಷ ಹಾಗೂ ಅಪಾರಾನುಭೂತಿಯೊಂದಿಗೆ ನೀನು ಆಕಾಶದಲ್ಲಿ ನಕ್ಷತ್ರವಾಗಿ ಮಿಂಚುತ್ತಿರಬಹುದು. ನೀನು ಸದಾ ಶೂಟಿಂಗ್ ಸ್ಟಾರ್ ಆಗಿ ಮಿಂಚುತ್ತಿಯಾ. ಓ ನನ್ನ ಶೂಟಿಂಗ್ ಸ್ಟಾರ್ ನಾನು ನಿನಗಾಗಿ ಕಾಯುತ್ತಿದ್ದೇನೆ. ನೀನು ನನಗಾಗಿ ಮರಳಿ ಬಂದೇ ಬರುತ್ತಿಯಾ ಎಂಬ ನಂಬಿಕೆ ನನ್ನದು.

ನೀನು ತುಂಬಾ ಸುಂದರ ವ್ಯಕ್ವಿತ್ವದವನು. ಪ್ರಪಂಚ ನೋಡಿದ ಅದ್ಭುತಗಳಲ್ಲಿ ನೀನು ಒಬ್ಬ. ನಮ್ಮ ನಡುವಿನ ಪ್ರೀತಿಯನ್ನು ವಿವರಿಸಲು ಹೋದರೆ ಪದಗಳೇ ಅಸಮರ್ಥವಾಗಬಹುದು. ನೀನು ಪ್ರೀತಿ ಎಂಬುದು ನಮ್ಮ ಪರಿಧಿಯನ್ನೂ ಮೀರಿದ್ದು ಎಂದಿದ್ದೆ. ಅದರ ಅರ್ಥ ನಿಮಗೆ ಮೊದಲೇ ತಿಳಿದಿತ್ತು ಎನ್ನಿಸುತ್ತದೆ.

ನೀನು ಎಲ್ಲವನ್ನೂ ತೆರೆದ ಹೃದಯದಿಂದ ಪ್ರೀತಿಸುತ್ತಿದ್ದೆ. ನಮ್ಮ ಪ್ರೀತಿಯು ಪ್ರತಿಪಾದನೆಗೆ ನಿಲುಕದ್ದು ಎಂಬುದನ್ನು ನೀನು ಈಗ ನನಗೆ ಅರ್ಥ ಮಾಡಿಸಿರುವೆ.

ಶಾಂತಿಯಿಂದ ಇರು ಸುಶಿ

ನಿನ್ನನ್ನು ಕಳೆದುಕೊಂಡು ದೈಹಿಕವಾಗಿ ಕೆಳೆದುಕೊಂಡು 30 ದಿನಗಳಾಗಿವೆ. ಆದರೆ ಜೀವನಪೂರ್ತಿ ನಿನ್ನನ್ನು ಮನಸಾರೆ ಪ್ರೀತಿಸುತ್ತಿರುತ್ತೇನೆ.

ನೀನು ಪರಲೋಕದಲ್ಲಿದ್ದರೂ ನಮ್ಮ ಸಂಬಂಧ ಇಂದಿಗೂ ಜೀವಂತ.
ನಮ್ಮದು ಕೊನೆಯಿಲ್ಲ ಬಂಧನ..

ಎಂದು ನೋವಿನ ನುಡಿಗಳೊಂದಿಗೆ ಗೆಳೆಯನನ್ನು ನೆನೆದಿದ್ದಾರೆ ರಿಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.