ಸೋಮವಾರ, ಜುಲೈ 4, 2022
20 °C

RRR Pre Release Event Live: ಚಿಕ್ಕಬಳ್ಳಾಪುರ ಬಳಿ ಅದ್ಧೂರಿ ಸಮಾರಂಭ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ಆರ್‌ಆರ್‌ಆರ್‌ ಬಿಡುಗಡೆ ಪೂರ್ವ ಕಾರ್ಯಕ್ರಮ (ಫ್ರಿ ರಿಲೀಸ್ ಇವೆಂಟ್) ನಡೆಯುತ್ತಿದೆ.

ಸಿದ್ದತೆಗಳು ಪೂರ್ಣಗೊಂಡಿದ್ದು, ಕಾರ್ಯಕ್ರಮ ವೀಕ್ಷಿಸಲು ಲಕ್ಷಾಂತರ ಜನ ಜಮಾವಣೆಗೊಂಡಿದ್ದಾರೆ.

ಕಾರ್ಯಕ್ರಮವನ್ನು ಆರ್‌ಆರ್‌ಆರ್‌ ಚಿತ್ರತಂಡ ಹಾಗೂ ಕೆವಿಎನ್ ಫ್ರೊಡಕ್ಷನ್ ಆಯೋಜಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಕೆ.ಸುಧಾಕರ್, ನಿರ್ದೇಶಕ ಎಸ್‌.ಎಸ್‌. ರಾಜಮೌಳಿ, ನಟರಾದ ರಾಮ್‌ಚರಣ್, ಅಜಯ್ ದೇವಗನ್, ಜೂನಿಯರ್ ಎನ್‌ಟಿಆರ್, ನಟಿ ಆಲಿಯಾ ಭಟ್ ಭಾಗವಹಿಸಲಿದ್ದಾರೆ. ಎಂ.ಎಂ.ಕೀರವಾಣಿ ತಂಡ ಸಂಗೀತ ಕಾರ್ಯಕ್ರಮ ನಡೆಸಿ ಕೊಡಲಿದೆ.

 

ಇನ್ನು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ವಿಶೇಷ ಕಾರ್ಯಕ್ರಮ ಮೂಡಿ ಬರಲಿದೆ. ಸಿನಿಮಾ ಇದೇ ಮಾರ್ಚ್ 25 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

ಇದಕ್ಕೂ ಮುನ್ನ ದೇವನಹಳ್ಳಿ ಬಳಿ ಖಾಸಗಿ ರೆಸಾರ್ಟ್‌ ಒಂದರಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಚಿತ್ರತಂಡ, ಆರ್‌ಆರ್‌ಆರ್‌ ಸಿನಿಮಾ ಬಗ್ಗೆ ಸಾಕಷ್ಟು ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು