ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪು ಜೊತೆಗಿನ ಕೊನೆ ಕ್ಷಣದ ವಿಡಿಯೊ ಹಂಚಿಕೊಂಡ ನಟ ಜಗ್ಗೇಶ್: ಹೇಳಿದ್ದೇನು?

Last Updated 11 ಫೆಬ್ರುವರಿ 2022, 7:01 IST
ಅಕ್ಷರ ಗಾತ್ರ

ಬೆಂಗಳೂರು: ನಟ ಜಗ್ಗೇಶ್ ಅವರು ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಗೆ ಕಳೆದ ಕೊನೆ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಅವರು, ‘ಮಂತ್ರಾಲಯದಲ್ಲಿ 2021ರ ಏಪ್ರಿಲ್ 5ರ ಸೋಮವಾರ ಪುನೀತನ ಜೊತೆಯ ಕೊನೆಯ ಕ್ಷಣ. ಕರೆದು ಕೂರಿಸಿಕೊಂಡದ್ದು ಸಂತೋಷ ಆನಂದರಾಮನನ್ನು. ಈ ಅಪರೂಪದ ವಿಡಿಯೊ ಕಳಿಸಿದ ಮಂತ್ರಾಲಯ ಪ್ರೋ. ನರಸಿಂಹಾಚಾರ್ಯ ಅವರಿಗೆ ಧನ್ಯವಾದ. ಪುನೀತ ಅಲ್ಲಿಯೇ ರಾಯರ ಜೊತೆ ಉಳಿದುಬಿಟ್ಟ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಪುನೀತ್‌ ರಾಜ್‌ಕುಮಾರ್ ಅವರು ನಿಧನರಾಗಿ 4 ತಿಂಗಳು ಕಳೆದಿವೆ. ಪುನೀತ್ ಅಗಲಿಕೆಯ ಅಘಾತದಿಂದ ನಾಡಿನ ಜನತೆ ಹೊರಬಂದಿಲ್ಲ.

ಸದ್ಯ ಪುನೀತ್‌ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್‌’ ಟೀಸರ್ ಇಂದು (ಫೆ 11 ಶುಕ್ರವಾರ) ಬಿಡುಗಡೆಯಾಗಿದೆ. ಈ ಮೂಲಕ ಪುನೀತ್ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಸಿಕ್ಕಂತಾಗಿದೆ.

ಜೇಮ್ಸ್‌ ಸಿನಿಮಾಗೆ ನಿರ್ದೇಶಕ ಚೇತನ್‌ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹೊಸಪೇಟೆ ಉದ್ಯಮಿ ಕಿಶೋರ್‌ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ನಿಧನರಾಗುವುದಕ್ಕೂ ಮುನ್ನ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು. ಆದರೆ, ಅವರು ಡಬ್ಬಿಂಗ್‌ ಮಾಡಿರಲಿಲ್ಲ. ಶಿವರಾಜ್‌ ಕುಮಾರ್ ಧ್ವನಿ ನೀಡಿದ್ದಾರೆ.

ಈ ಸಿನಿಮಾ ಪುನೀತ್‌ ರಾಜ್‌ಕುಮಾರ್‌ ಜನ್ಮದಿನದಂದು (ಮಾ.17) ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT