ಬೆಂಗಳೂರು:‘ಇತ್ತೀಚೆಗೆ ಬಿಡುಗಡೆಯಾದ ‘ಕೆ.ಜಿ.ಎಫ್–2’ ಚಿತ್ರದ ಟೀಸರ್ ಹಾಗೂ ಪೋಸ್ಟರ್ನಲ್ಲಿ ಸಿಗರೇಟ್ ಸೇದುವುದನ್ನು ಪ್ರಚೋದಿಸಿದ್ದೀರಿ. ಇದು ತಂಬಾಕು ಉತ್ಪನ್ನಗಳ ಕಾಯ್ದೆಯ ಉಲ್ಲಂಘನೆಯಲ್ಲವೇ’ ಎಂದು ಪ್ರಶ್ನಿಸಿರುವ ಆರೋಗ್ಯ ಇಲಾಖೆ, ಚಿತ್ರ ನಟ ಯಶ್ ಗೆ ನೋಟಿಸ್ ನೀಡಿದೆ.

ಟೀಸರ್ನಲ್ಲಿ ತಾವು ಸಿಗರೇಟ್ ಸೇವನೆ ಮಾಡುವ ದೃಶ್ಯವಿದೆ. ಇದು ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಸೆಕ್ಷನ್ 5 ಹಾಗೂ ನಿಬಂಧನೆಗಳ ಉಲ್ಲಂಘನೆಯಾಗಿರುತ್ತದೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ತಾವು, ಸಾಮಾಜಿಕ ಕಳಕಳಿಯನ್ನು ಹೊಂದಿರುತ್ತಿರಿ. ಸಿಗರೇಟ್ ಸೇವನೆಯಂತಹ ದೃಶ್ಯದಲ್ಲಿ ನೀವು ಕಾಣಿಸಿಕೊಂಡಲ್ಲಿ ಅಭಿಮಾನಿಗಳು ಅದನ್ನು ಅನುಕರಿಸುತ್ತಾರೆ. ಇದರಿಂದ ಅವರು ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಒಳಪಡುವ ಸಾಧ್ಯತೆ ಇರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಿಗರೇಟ್ ಸೇವನೆಯಂತಹ ದೃಶ್ಯಗಳನ್ನು ತೆರವುಗೊಳಿಸಲು ತಕ್ಷಣವೇ ಚಿತ್ರ ತಂಡದವರಿಗೆ ಸೂಚನೆ ನೀಡಿ, ಆರೋಗ್ಯವಂತ ಸಮಾಜ ಕಟ್ಟಲು ಇಲಾಖೆಯ ಜತಗೆ ಸಹಕರಿಸಿ ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.