ಶುಕ್ರವಾರ, ಮೇ 20, 2022
26 °C

ಹೊಸ ಫೋಟೊ ಹಂಚಿಕೊಂಡ ರಾಧಿಕಾ ಪಂಡಿತ್: ಅಭಿಮಾನಿಗಳಿಂದ ಭಾರಿ ಮೆಚ್ಚುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ನಟನೆಯಿಂದ ದೂರ ಉಳಿದಿರುವ ರಾಧಿಕಾ, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದು, ಮಕ್ಕಳಾದ
ಐರಾ ಮತ್ತು ಯಥರ್ವ್‌ ಜೊತೆ ಬ್ಯುಸಿ ಆಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ರಾಧಿಕಾ, ಯಶ್‌ ಮತ್ತು ಮಕ್ಕಳ ಜೊತೆಗಿನ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.  

ಇದೀಗ ಮಾಲ್ಡೀವ್ಸ್‌ ಪ್ರವಾಸದ ಫೋಟೊಗಳನ್ನು ಹಂಚಿಕೊಂಡಿರುವ ಅವರು, ‘ನನ್ನ ಪಾಕೆಟ್​ನಲ್ಲಿ ಸ್ವಲ್ಪ ಸೂರ್ಯನ ಕಿರಣ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೊ ಸಖತ್‌ ವೈರಲ್‌ ಆಗುತ್ತಿದೆ.

2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದಲ್ಲಿ ರಾಧಿಕಾ ನಟಿಸಿದ್ದರು. ಇದಾದ ನಂತರದಲ್ಲಿ ಅವರು ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ.

ಓದಿ...

ಇದು ಅವಳ ಕೊನೆಯ ಮುತ್ತು: ಸಮನ್ವಿ ಬಗ್ಗೆ ತಾಯಿ ಅಮೃತಾ ರೂಪೇಶ್ ಭಾವುಕ ನುಡಿ

32ನೇ ವಸಂತಕ್ಕೆ ಕಾಲಿಟ್ಟ ವರುಣ್ ತೇಜ್‌: ಚಿರಂಜೀವಿ ಸೇರಿ ಗಣ್ಯರಿಂದ ಶುಭ ಹಾರೈಕೆ

ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾಣಿ: ಹಾಟ್ ಫೋಟೊ, ವಿಡಿಯೊ ವೈರಲ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು