ಭಾನುವಾರ, ಮೇ 29, 2022
21 °C

ಕಂಬ್ಯಾಕ್‌ ಮಾಡುವುದಿದ್ದರೆ ಅಪ್ಪು ಜೊತೆಗೇ ಎಂದಿದ್ದೆ: ರಮ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುನೀತ್‌ ರಾಜ್‌ಕುಮಾರ್ ಹಾಗೂ ರಮ್ಯಾ ಜೋಡಿ ‘ಅಭಿ’ ಸಿನಿಮಾ ಮೂಲಕ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಿತ್ತು. ಈ ಹಿಟ್‌ ಜೋಡಿ ಚಂದನವನದಲ್ಲಿ ಹಲವು ಹಿಟ್‌ ಸಿನಿಮಾಗಳನ್ನು ನೀಡಿತ್ತು. ಇದೀಗ ಅಪ್ಪು ನಿಧನ ಇಡೀ ಚಿತ್ರರಂಗವನ್ನು ಆಘಾತಕ್ಕೆ ದೂಡಿದೆ. ಈ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿರುವ ನಟಿ ರಮ್ಯಾ, ‘ಸಿನಿಮಾಗೆ ಮತ್ತೆ ಮರಳುವುದಿದ್ದರೆ ಅಪ್ಪು ಜೋಡಿಯಾಗೇ ಬರುವುದು’ ಎಂದಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.    

‘ನಾನು ಪುನೀತ್‌ ಅವರು ‘ಅಪ್ಪು’ ಸಿನಿಮಾಗಾಗಿ ಫೋಟೊಶೂಟ್‌ ಮಾಡಿಸಿದ್ದೆವು. ಆದರೆ ನನಗೆ ಆ ಸಿನಿಮಾದಲ್ಲಿ ನಟಿಸಲಾಗಲಿಲ್ಲ. ನಂತರದಲ್ಲಿ ನಾನು ಪುನೀತ್‌ ಜೊತೆ ‘ಅಭಿ’ ಸಿನಿಮಾ ಮಾಡಿದೆ. ನಂತರದಲ್ಲಿ ಸಾಲುಸಾಲಾಗಿ ಮೂರ್ನಾಲ್ಕು ಸಿನಿಮಾಗಳನ್ನು ಪುನೀತ್‌ ಅವರ ಜೊತೆ ಮಾಡಿದೆ. ಸೆಟ್‌ನಲ್ಲಿ ಯಾವುತ್ತೂ ಅಪ್ಪು ನಾನು ರಾಜ್‌ಕುಮಾರ್‌ ಅವರ ಮಗ ಎಂಬ ಹಮ್ಮು ತೆಗೆದುಕೊಂಡು ಬಂದಿರಲಿಲ್ಲ. ಅವರು ಬಹಳ ಸರಳವಾಗಿದ್ದರು. ದೊಡ್ಡವರಾಗಲಿ ಅಥವಾ ಸಣ್ಣವರೇ ಇರಲಿ ಎಲ್ಲರನ್ನೂ ಒಂದೇ ಸಮನಾಗಿ ನೋಡುತ್ತಿದ್ದರು’ ಎಂದಿದ್ದಾರೆ ರಮ್ಯಾ.

ಇದನ್ನೂ ಓದಿ: 

ಶಿವಣ್ಣನಿಗೆ ಜೋಡಿಯಾಗಿ ನಾನು ಅಭಿನಯಿಸುವ ಸಿನಿಮಾವನ್ನು ನಿರ್ದೇಶಿಸಬೇಕು ಎಂಬ ಕನಸು ಅಪ್ಪುವಿಗಿತ್ತು. ಅವರ ಬ್ಯಾನರ್‌ನಲ್ಲಿ ಯಾವುದೇ ಸಿನಿಮಾ ಮಾಡಿದರೆ ನನಗೆ ಮೊದಲ ಆದ್ಯತೆ ನೀಡುತ್ತಿದ್ದರು. ‘ನಾವಿಬ್ಬರೂ ಮತ್ತೆ ಜೊತೆಯಾಗಿ ಸಿನಿಮಾ ಮಾಡುವುದಿದ್ದರೆ ಪ್ರೇಕ್ಷಕರ ನಿರೀಕ್ಷೆ ಬಹಳ ಹೆಚ್ಚಾಗಿರುತ್ತದೆ. ಮತ್ತೆ ಸಿನಿಮಾ ಕ್ಷೇತ್ರಕ್ಕೆ ಮರಳುವುದಿದ್ದರೆ ಅಪ್ಪು ಜೋಡಿಯಾಗಿಯೇ ಎಂದು ನಾನು ಅವರಲ್ಲಿ ಹೇಳಿದ್ದೆ’ ಎಂದು ರಮ್ಯಾ ನೆನಪಿಸಿಕೊಂಡರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು