‘ಕಲ್ಟ್’ ಚಿತ್ರದ ಪೋಸ್ಟರ್ ಹಂಚಿಕೊಂಡು ನಟಿ ರಚಿತಾ ರಾಮ್ ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದ್ದಾರೆ.
ಚಿತ್ರ ಕೃಪೆ: ಇನ್‌ಸ್ಟಾಗ್ರಾಂ
ನಟಿ ಅದಿತಿ ಪ್ರಭುದೇವ ಅವರು ತಮ್ಮ ಮಗಳು ನೇಸರ ಜೊತೆ ಸಂಕ್ರಾಂತಿಯನ್ನು ಸಂಭ್ರಮಿಸಿದ್ದಾರೆ.
ಎಳ್ಳು ಬೆಲ್ಲ ಹಿಡಿದು ಫೋಟೊ ಕ್ಲಿಕ್ಕಿಸಿಕೊಂಡು ನಟಿ ಕಾರುಣ್ಯ ರಾಮ್ ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ್ದಾರೆ.
ಹಬ್ಬದ ಸಂಭ್ರಮದಲ್ಲಿರುವ ನಟಿ ಮಲೈಕಾ ವಸುಪಾಲ್ ಅವರು ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
‘ಬಂದ್ಬುಡ್ತು ಸುಗ್ಗಿ ಹಬ್ಬ ... ನಮ್ ಆಶೋಕ ಅಂಬಿಕಾನ ಕಡೆಯಿಂದ ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಎಳ್ಳು-ಬೆಲ್ಲ ತಿಂದ್ಬಿಟ್ಟು, ಹಳೇದ್ನೆಲ್ಲ ಮರ್ತು, ಮಸ್ತ್ ಆಗಿ ಇರ್ರಿ’ ಎಂದು ನಟ ಸತೀಶ್ ನೀನಾಸಂ ಬರೆದುಕೊಂಡಿದ್ದಾರೆ.
ಸಂಕ್ರಾಂತಿ ಹಬ್ಬದ ಪೋಸ್ಟರ್ ಹಂಚಿಕೊಂಡು ಪಿಆರ್‌ಕೆ ಪ್ರೊಡಕ್ಷನ್ ಶುಭಾಶಯ ತಿಳಿಸಿದೆ.