ಮಂಗಳವಾರ, ಆಗಸ್ಟ್ 3, 2021
21 °C

ನೃತ್ಯ ಸಂಯೋಜಕಿ ಸರೋಜ್‌ ಖಾನ್ ನಿಧನಕ್ಕೆ ಕಂಬನಿ ಮಿಡಿದ ಬಾಲಿವುಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನಕ್ಕೆ ಬಾಲಿವುಡ್‌ ನಟ–ನಟಿಯರು ಕಂಬನಿ ಮಿಡಿದಿದ್ದಾರೆ. ಬಾಲಿವುಡ್‌ ಸಿನಿಮಾ ರಂಗದಲ್ಲಿ ಪ್ರೀತಿಯಿಂದ ‘ಮಾಸ್ಟರ್‌ಜೀ‘ ಎಂದೇ ಕರೆಯುತ್ತಿದ್ದ ಸರೋಜ್ ಅವರ ಜತೆಗಿನ ಒಡನಾಟಗಳನ್ನು ನೆನಪಿಸಿಕೊಳ್ಳುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

‘ನನ್ನ ನೃತ್ಯ ಗುರು, ಒಳ್ಳೆಯ ಸ್ನೇಹಿತೆ ಸರೋಜ್ ಖಾನ್ ಅವರನ್ನು ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ನೆರವಾದ ಅವರಿಗೆ ನಾನೆಂದು ಚಿರರುಣಿಯಾಗಿರುತ್ತೇನೆ. ಅವರೊಬ್ಬ ಅತ್ಯದ್ಭುತ ಪ್ರತಿಭಾವಂತ ವ್ಯಕ್ತಿ. ನಾನು ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅವರ ಅಗಲಿಕೆಯಿಂದ ನೊಂದಿರುವ ಕುಟುಂಬಕ್ಕೆ ತೀವ್ರ ಸಂತಾಪಗಳು' ಎಂದು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಟ್ವೀಟ್ ಮಾಡಿದ್ದಾರೆ.

ನಟಿ ಕಾಜಲ್ ಅಗರ್‌ವಾಲ್‌ ಟ್ವೀಟ್ ಮಾಡಿ, ‘ಪ್ರತಿಯೊಬ್ಬ ಸಿನಿ ಕಲಾವಿದನಿಗೆ ಒಂದೇ ಕನಸು; ನಿಮ್ಮ ಮಾರ್ಗದರ್ಶನದಲ್ಲಿ ನೃತ್ಯಮಾಡಬೇಕೆಂಬುದು. ನಾನು ಅದನ್ನು ಮಿಸ್‌ ಮಾಡಿಕೊಂಡೆ ಮೇಡಂ' ಎಂದಿದ್ದಾರೆ.

***

ಬೆಳಿಗ್ಗೆ ಬೆಳಿಗ್ಗೆಯೇ ‘ಖ್ಯಾತ ಕೊರಿಯೊಗ್ರಾಫರ್ ಸರೋಜ್‌ಖಾನ್ ಇನ್ನಿಲ್ಲ‘ ಎಂಬ ದುಃಖದ ಸುದ್ದಿ ಕೇಳಿದೆ. ಸರೋಜ್ ಅವರು ‘ಯಾರು ಬೇಕಾದರೂ ನೃತ್ಯ ಮಾಡಬಹುದು‘ ಎನ್ನುವಂತೆ ನೃತ್ಯ ಕಲಿಸುತ್ತಿದ್ದರು. ಅವರಿಂದ ಸಿನಿಮಾ ಇಂಡಸ್ಟ್ರಿಗೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

– ಅಕ್ಷಯ್‌ ಕುಮಾರ್, ಬಾಲಿವುಡ್ ನಟ.

***
ನನ್ನಂತಹ ಅನೇಕರಿಗೆ ಸ್ಪೂರ್ತಿದಾಯಕವಾಗಿದ್ದವರು ನೀವು ಸರೋಜ್‌ಜಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.

– ಫರ‍್ಹಾ ಖಾನ್, ನಟಿ ನಿರ್ದೇಶಕಿ, ನಿರ್ಮಾಪಕಿ, ಸಿನಿಮೆಟೊಗ್ರಾಫರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು