ಶುಕ್ರವಾರ, ಆಗಸ್ಟ್ 12, 2022
20 °C

Video: 2023ಕ್ಕೆ ಶಾರುಖ್‌–ದೀಪಿಕಾ ಅಭಿನಯದ 'ಪಠಾಣ್‌' ತೆರೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಶಾರುಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ

'ಈಗಾಗಲೇ ತಡವಾಗಿರುವುದು ತಿಳಿದಿದೆ....ಆದರೆ, ದಿನಾಂಕ ನೆನಪಿಟ್ಟುಕೊಳ್ಳಿ...ಪಠಾಣ್‌ ಸಮಯ ಶುರುವಾಗ್ತಿದೆ...' ಎಂದು ನಟ ಶಾರುಖ್‌ ಖಾನ್‌ ಟ್ವೀಟಿಸಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಠಾಣ್‌ ಬಿಡುಗಡೆಗೆ ಸಿದ್ಧವಾಗಿದೆ.

ಆ್ಯಕ್ಷನ್‌–ಥ್ರಿಲ್ಲರ್‌ ಕಥೆ ಒಳಗೊಂಡಿರುವ 'ಪಠಾಣ್‌' ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ 2023ರ ಜನವರಿ 25ರಂದು ತೆರೆ ಕಾಣಲಿದೆ ಎಂದು ಪ್ರಕಟಿಸಿದ್ದಾರೆ.

2018ರಲ್ಲಿ ತೆರೆಕಂಡಿದ್ದ 'ಝೀರೊ' ಸಿನಿಮಾದ ನಂತರ ಶಾರುಖ್‌ ಅಭಿನಯಿಸಿರುವ ಸಿನಿಮಾ ಪಠಾಣ್‌. ಟೀಸರ್‌ನಲ್ಲಿ ನಟ ಜಾನ್‌ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಅವರು ಶಾರುಖ್‌ ಅವರನ್ನು ಪರಿಚಯಿಸುವುದನ್ನು ಕಾಣಬಹುದಾಗಿದೆ. ಆದರೆ, ಅವರ ಲುಕ್‌ ಹೇಗಿದೆ ಎಂಬುದು ಈ ಟೀಸರ್‌ನಲ್ಲಿ ಬಹಿರಂಗವಾಗಿಲ್ಲ.

ಸಿದ್ಧಾರ್ಥ್‌ ಆನಂದ್‌ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಶಾರುಖ್‌ ಗೂಢಚಾರನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕೊರೊನಾ ವೈರಸ್‌ ಸಾಂಕ್ರಾಮಿಕದ ಎರಡನೇ ಅಲೆಗೂ ಮುನ್ನ ವೈಆರ್‌ಎಫ್‌ ಸ್ಟುಡಿಯೋಸ್‌ ನಿರ್ಮಾಣದ ಪಠಾಣ್‌ ಸಿನಿಮಾ ಚಿತ್ರೀಕರಣದಲ್ಲಿ ಶಾರುಖ್‌ ಭಾಗಿಯಾಗಿದ್ದರು. ಸಿನಿಮಾದ ಕೆಲವು ಭಾಗಗಳನ್ನು ದುಬೈನಲ್ಲೂ ಚಿತ್ರೀಕರಿಸಲಾಗಿದೆ. ಹಲವು ಸಾಹಸಮಯ ದೃಶ್ಯಗಳನ್ನು ಸಿನಿಮಾ ಒಳಗೊಂಡಿದ್ದು, ಸಲ್ಮಾನ್‌ ಖಾನ್‌ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ದೀಪಿಕಾ ಮತ್ತು ಶಾರುಖ್‌ ಜೊತೆಯಾಗಿ ಅಭಿನಯಿಸಿರುವ ನಾಲ್ಕನೇ ಸಿನಿಮಾ ಇದು. ಈ ಜೋಡಿಯ ಓಂ ಶಾಂತಿ ಓಂ, ಚೆನ್ನೈ ಎಕ್ಸ್‌ಪ್ರೆಸ್‌ ಹಾಗೂ ಹ್ಯಾಪಿ ನ್ಯೂ ಇಯರ್‌ ಸಿನಿಮಾಗಳು ಚಿತ್ರ ಪ್ರಿಯರ ಮೆಚ್ಚುಗೆ ಗಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು