ಭಾನುವಾರ, ಆಗಸ್ಟ್ 1, 2021
27 °C

ಶಾಹಿದ್‌– ಮೀರಾ ಜೋಡಿಗೆ 5ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಬೀರ್‌ ಸಿಂಗ್‌’ ಸಿನಿಮಾ ಖ್ಯಾತಿಯ ಶಾಹಿದ್‌ ಕಪೂರ್‌ ಹಾಗೂ ಮೀರಾ ರಜಪೂತ್‌ ಮಂಗಳವಾರ ತಮ್ಮ 5ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ಸಂತೋಷದ ಸಮಯದಲ್ಲಿ ಮೀರಾ ರಜಪೂತ್‌  ಪ್ರೀತಿಯ ಪತಿಗೆ ತಮ್ಮ ಹೃದಯದ ಮಾತುಗಳನ್ನು ಬರೆದು ಇನ್‌ಸ್ಟಾಗ್ರಾಂ‌ನಲ್ಲಿ ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ. 

ಪೋಸ್ಟ್‌ನಲ್ಲಿ ಇಬ್ಬರು ನಗುನಗುತ್ತಾ ಇರುವ ಫೋಟೊವನ್ನು ಹಂಚಿಕೊಂಡಿರುವ ಮೀರಾ , ‘ಐದು ವರ್ಷಗಳು, ನಾಲ್ಕು ಆತ್ಮ, ಮೂರು ಮನೆ, ಇಬ್ಬರು ಮಕ್ಕಳು, ಒಂದು ಸುಂದರ ಸಂಸಾರ. ನಾನು ಪ್ರತಿದಿನ ನಿನ್ನ ಪ್ರೀತಿಯಲ್ಲಿ ಬೀಳುತ್ತೇನೆ. ನಿನ್ನಂಥ ಉತ್ತಮ ಸ್ನೇಹಿತನನ್ನು, ಪ್ರೀತಿಯನ್ನು ಪಡೆದುಕೊಂಡಿರುವ ನನ್ನಂಥ ಭಾಗ್ಯಶಾಲಿ ಯಾರೂ ಇಲ್ಲ. ಕೈ ಕೈ ಹಿಡಿದು ಜೊತೆಯಾಗಿ ಸಾಗುವ’ ಎಂದು ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. 

ಇನ್ನು ನಟ ಶಾಹಿದ್‌ ಕಪೂರ್‌ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಪತ್ನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ. 

‘5 ವರ್ಷಗಳು ಮಿಂಚಿನಂತೆ ಕಳೆದುಹೋದವು. ಇಷ್ಟು ವರ್ಷಗಳಲ್ಲಿ ನಾವಿಬ್ಬರೂ ಸಣ್ಣ ಸಣ್ಣ ವಿಚಾರಗಳಲ್ಲೂ ಸೌಂದರ್ಯ ಕಂಡಿದ್ದೇವೆ. ಜೀವನವನ್ನು ಒಟ್ಟಾಗಿ ಅರ್ಥ ಮಾಡಿಕೊಂಡಿದ್ದೇವೆ. ನಾನು ನನ್ನನ್ನು ಸುಧಾರಿಸಿಕೊಳ್ಳಲು ನೀನು ನೀಡಿರುವ ಸಹಕಾರ ಬಹಳ ದೊಡ್ಡದು. ಧನ್ಯವಾದಗಳು’ ಎಂದು ಹಾರೈಸಿದ್ದಾರೆ. 

ಮೀರಾ ಹಾಗೂ ಶಾಹಿದ್‌ ಕಪೂರ್‌ ಪೋಸ್ಟ್‌ಗಳನ್ನು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದು, ಅಭಿಮಾನಿಗಳು, ಬಾಲಿವುಡ್‌ ನಟ– ನಟಿಯರು ಶುಭ ಕೋರಿದ್ದಾರೆ. 

ಶಾಹಿದ್‌– ಮೀರಾ ಜೋಡಿ 2015ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಮಿಶಾ ಕಪೂರ್‌ ಹಾಗೂ ಜೈನ್‌ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇವರಿಬ್ಬರದು ಲವ್‌ ಮ್ಯಾರೇಜ್‌. ಮೀರಾ ತಮ್ಮ 20ನೇ ವಯಸ್ಸಿನಲ್ಲಿ ಶಾಹಿದ್‌ ಕೈಹಿಡಿದಿದ್ದರು. ಅವರಿಬ್ಬರ ನಡುವೆ 14 ವರ್ಷ ವಯಸ್ಸಿನ ಅಂತರವಿದೆ. ಮದುವೆ ಸಮಯದಲ್ಲಿ ಈ ವಿಷಯವೇ ದೊಡ್ಡ ಸುದ್ದಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು