ಶಾಹೀದ್ ಕಪೂರ್ ಮತ್ತು ತೃಪ್ತಿ ಧಿಮ್ರಿ ನಟನೆಯ ಮುಂಬರುವ ಬಾಲಿವುಡ್ ಚಿತ್ರ ‘ಓ' ರೋಮಿಯೋ’ ಬಿಡುಗಡೆ ಮಾಡದಂತೆ ಹುಸೇನ್ ಉಸ್ತಾರ ಪುತ್ರಿ ಸನೋಬರ್ ಶೇಖ್ ಸೋಮವಾರ ಮುಂಬೈ ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

‘ಓ' ರೋಮಿಯೋ’ ಸಿನಿಮಾ ಹುಸೇನ್ ಉಸ್ತಾರ ಅವರ ಜೀವನಚರಿತ್ರೆಯನ್ನು ಆಧರಿಸಿದೆ. ಆದರೆ ಸಿನಿಮಾದಲ್ಲಿ ಅವರನ್ನು ದರೋಡೆಕೋರನನ್ನಾಗಿ ಚಿತ್ರಿಸಲಾಗಿದ್ದು, ಅವರ ಜೀವನವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಸನೋಬರ್ ಶೇಖ್ ಆರೋಪಿಸಿದ್ದಾರೆ.
.‘ಓ ರೋಮಿಯೊ’.. ಶಾಹೀದ್ ಕಪೂರ್– ತೃಪ್ತಿ ಧಿಮ್ರಿ ಹೊಸ ಸಿನಿಮಾ ಟೈಟಲ್ ಅನಾವರಣ.ಶಾಹೀದ್ ಕಪೂರ್ ಮುಂದಿನ ಚಿತ್ರ ‘ಅಶ್ವತ್ಥಾಮ‘ನಿಗೆ ಕನ್ನಡಿಗ ಸಚಿನ್ ರವಿ ನಿರ್ದೇಶನ.
ಸಿನಿಮಾ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ, ನಿರ್ದೇಶಕ ವಿಶಾಲ್ ಭಾರದ್ವಾಜ್ ಹಾಗೂ ಪತ್ರಕರ್ತ ಮತ್ತು ಲೇಖಕ ಹುಸೇನ್ ಜೈದಿ ವಿರುದ್ಧ ಸನೋಬರ್ ಶೇಖ್ ಅವರು ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ನ್ಯಾಯಾಲಯ ಇದೇ ಫೆಬ್ರುವರಿ 6ರಂದು ವಿಚಾರಣೆ ನಡೆಸಲಿದೆ.

ಸಿನಿಮಾದಲ್ಲಿ ನಟ ಶಾಹಿದ್ ಕಪೂರ್, ಹುಸೇನ್ ಉಸ್ತಾರ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಜೈದಿ ಅವರ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಪುಸ್ತಕವನ್ನು ಆಧರಿಸಿದೆ. ಚಿತ್ರವು ಫೆಬ್ರುವರಿ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ನ್ಯಾಯಾಲಯದ ತೀರ್ಪು ಬರುವವರೆಗೂ ಸಿನಿಮಾವನ್ನು ಯಾವುದೇ ವೇದಿಕೆ ಹಾಗೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದಂತೆ ತಡೆಯಾಜ್ಞೆ ವಿಧಿಸಲಾಗಿದೆ.

‘ಓ' ರೋಮಿಯೋ’ ಸಿನಿಮಾವನ್ನು ಆರ್ಥಿಕ ಲಾಭದ ಉದ್ದೇಶದಿಂದ ನಿರ್ಮಿಸಲಾಗುತ್ತಿದ್ದು, ಚಿತ್ರತಂಡವು ಸನೋಬರ್ ಶೇಖ್ ಅವರಿಂದ ಯಾವುದೇ ಪೂರ್ವಾನುಮತಿ ಪಡೆದಿಲ್ಲ’ ಎಂದು ಸನೋಬರ್ ಶೇಖ್ ಪರ ವಕೀಲ ಡಿ.ವಿ. ಸರೋಜ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.