ಅಶ್ವಿನಿ ಅಂಗಡಿ ದಂಪತಿ ನಟಿಸಿರುವ ‘ಶರತ್ ಮತ್ತು ಶರಧಿ’ ಕಿರುಚಿತ್ರ ಇತ್ತೀಚೆಗಷ್ಟೇ ವಿಶೇಷ ಪ್ರದರ್ಶನ ಕಂಡಿತು. ಈ ಅಂಧ ದಂಪತಿ ಇಲ್ಲಿಯೂ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಕಿರುಚಿತ್ರವನ್ನು ಎಂ.ಜಗದೀಶ್ ಬರೆದು, ನಿರ್ದೇಶಿಸಿದ್ದಾರೆ. ಟಾಕ್ಗುರು ಕ್ರಿಯೇಶನ್ಸ್ ಅಡಿಯಲ್ಲಿ ಗಣೇಶ್.ಬಿ.ಎಂ. ಬಂಡವಾಳ ಹೂಡಿದ್ದಾರೆ.

‘ಒಂದು ಸನ್ನಿವೇಶದಲ್ಲಿ ನಾವು ಕರೆಂಟ್ ಬಿಲ್ ದುಡ್ಡು ಉಳಿಸಬಹುದು ಎಂಬ ಸಂಭಾಷಣೆ ಇತ್ತು. ಅಶ್ವಿನಿಯವರು ಇದನ್ನು ತೆಗೆದುಬಿಡಿ. ನಮಗೆ ಕತ್ತಲೆ ಇರಬಹುದು. ನಮ್ಮ ಮನಸಲ್ಲಿ ಕತ್ತಲಿರಬಾರದು. ಹಾಗೇನಾದರೂ ಇದ್ದರೆ ನಮ್ಮದು ಕತ್ತಲೆ ಮನೆ ಎಂದಾಗುತ್ತದೆ ಎಂದರು. ಈ ದಂಪತಿ ಬದುಕನ್ನು ಸಕರಾತ್ಮಕವಾಗಿ ನೋಡುತ್ತಿದ್ದಾರೆ. ದತ್ತಣ್ಣ ಕೂಡ ಕಿರುಚಿತ್ರವೆಂದು ನೋಡದೆ ಚಿತ್ರದ ವಿಷಯದ ಮೇಲಿನ ಕಾಳಜಿಯಿಂದ ನಟಿಸಿದ್ದಾರೆ’ ಎಂದರು ನಿರ್ದೇಶಕರು.

‘ವೀರೇಶ್ ಹಾಗೂ ಅಶ್ವಿನಿ ದಂಪತಿ ಎಲ್ಲರ ಮಧ್ಯೆ ಸುಖದಿಂದ ಬದುಕಿನ ಪಯಣ ಸಾಗಿಸುತ್ತಿದ್ದಾರೆ. ನಮಗೂ ಅವರಿಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಸಮಾಜ ಕೂಡ ಅವರನ್ನು ಬೇರೆ ರೀತಿಯಲ್ಲಿ ನೋಡಬೇಕಾದ ಅಗತ್ಯ ಇಲ್ಲ. ನಾವು ವಿಭಿನ್ನವಾಗಿ ಸಬಲರಾಗಿದ್ದೇವೆ. ಆದರೆ ನಾವು ಅಂಗವಿಕಲರಲ್ಲ ಎಂಬ ಅರ್ಥಪೂರ್ಣ ಸಂದೇಶವನ್ನು ನಿರ್ದೇಶಕರು ಚಿತ್ರದಲ್ಲಿ ಹೇಳಿದ್ದಾರೆ’ ಎಂದರು ದತ್ತಣ್ಣ.

ಸತೀಶ್ ಪದ್ಮನಾಭನ್ ಸಂಗೀತ, ವಿನಯ್ ಹೊಸಗೌಡರ್ ಛಾಯಾಚಿತ್ರಗ್ರಹಣ, ಸುಪ್ರೀತ್.ಬಿ.ಕೆ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.