ನಟ ಶಿವರಾಜ್ ಕುಮಾರ್ ಅವರ ಕಂಠಸಿರಿಯಲ್ಲಿ ಅಯ್ಯಪ್ಪನ ಭಕ್ತಿಗೀತೆಯೊಂದು ಮೂಡಿ ಬಂದಿದೆ. ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್ನಲ್ಲಿ ‘ತತ್ವಮಸಿಯೇ ಅಯ್ಯಪ್ಪ ತತ್ವಮಸಿಯೇ’ ಲಿರಿಕಲ್ ವಿಡಿಯೋ ಒಂದನ್ನು ಹಂಚಿಕೊಂಡಿದೆ.

ವಿಡಿಯೊದಲ್ಲಿ ಶಿವಣ್ಣ ಹಾಗೂ ದೊಡ್ಡಮನೆ ಕುಟುಂಬದವರು ಸಹಕಲಾವಿದರೊಂದಿಗೆ ಮಾಲೆ ಧರಿಸಿ ಶಬರಿಮಲೆಗೆ ತೆರಳಿದ್ದ ಫೋಟೊಗಳನ್ನು ಕಾಣಬಹುದು. ವಿಶೇಷ ಏನೆಂದರೆ ಅಪ್ಪು ಜೊತೆ ಶಿವಣ್ಣ ಕೂಡ ಶಬರಿಮಲೆ ಏರಿ ಅಯ್ಯಪ್ಪನ ದರ್ಶನ ಮಾಡಿದ್ದನ್ನು ನೋಡಬಹುದು. ಅಯ್ಯಪ್ಪನ ಭಕ್ತಿಗೀತೆ ಹಾಡಿನಲ್ಲಿ ಶಿವಣ್ಣನ ಜೊತೆ ಮಾಲೆ ಧರಿಸಿದ್ದ ಹಳೆ ಫೋಟೋಗಳನ್ನು ಹಾಕಲಾಗಿದೆ.
.‘ದಿ ಡೆವಿಲ್’ ಸಿನಿಮಾ ರಿಲೀಸ್; ಜೈಲಿನಿಂದಲೇ ಅಭಿಮಾನಿಗಳಿಗೆ ದಾಸನ ಸಂದೇಶ.Sandalwood: ದರ್ಶನ್ ನಟನೆಯ 'ಡೆವಿಲ್' ಹಿಂದಿಕ್ಕಿದ ಸುದೀಪ್ ಅಭಿನಯದ 'ಮಾರ್ಕ್'.
ಡಾ. ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ವಿನಯ್ ರಾಜ್ ಕುಮಾರ್, ಯುವ ರಾಜ್ಕುಮಾರ್ ಕೂಡ ಮಾಲೆ ಹಾಕಿಕೊಂಡು ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದರು. ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸಹ ಅಯ್ಯಪ್ಪನ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಈ ಹಿಂದೆಯೂ ಕೂಡ ರಾಜಕುಮಾರ್ ಅವರ ಜೊತೆ ಶಿವರಾಜ್ ಕುಮಾರ್ ಸಾಕಷ್ಟು ಭಕ್ತಿ ಗೀತೆಗಳನ್ನು ಹಾಡಿದ್ದಾರೆ.

ಈಗಾಗಲೇ ರಾಜ್ಯದೆಲ್ಲೆಡೆ ಭಕ್ತರು ಅಯ್ಯಪ್ಪನ ಮಾಲೆ ಧರಿಸಿ ವ್ರತ ಆರಂಭಿಸಿದ್ದಾರೆ. ಜನವರಿಯಲ್ಲಿ ಅಯ್ಯಪ್ಪ ಮಾಲಧಾರಿಗಳು ಶಬರಿಮಲೆಗೆ ಭೇಟಿ ನೀಡಲಿದ್ದಾರೆ. ಅಲ್ಲಿಯವರೆಗೂ ಭಕ್ತರು ಅಯ್ಯಪ್ಪನ ಹಾಡುಗಳನ್ನು ಕೇಳುತ್ತಾ ಜಪ ಮಾಡುತ್ತಾರೆ. ಈ ನಡುವೆ ಶಿವಣ್ಣ ಕೂಡ ಅಯ್ಯಪ್ಪನ ಭಕ್ತಿಗೀತೆ ಹಾಡುವ ಮೂಲಕ ಅಯ್ಯಪ್ಪನನ್ನು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.