ಬೆಂಗಳೂರು: ಸೂರ್ಯ ಅಭಿನಯದ 'ಸೂರರೈ ಪೋಟ್ರು' ಸಿನಿಮಾ ಆಸ್ಕರ್ ಸ್ಪರ್ಧೆಗಿಳಿದಿದೆ. ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧಾರಿತ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾದ ತಮಿಳು ಭಾಷೆಯ ಮೊದಲ ಚಿತ್ರ.
ಕೋವಿಡ್–19 ಸಾಂಕ್ರಾಮಿಕದಿಂದಾಗಿ ಅಕಾಡೆಮಿ ಪ್ರಶಸ್ತಿಗಳ (ಆಸ್ಕರ್) ಆಯೋಜಕರು ಈ ವರ್ಷ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದು, ಒಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳು ಸಹ ಆಸ್ಕರ್ ಸ್ಪರ್ಧೆಯಲ್ಲಿ ಸ್ಪರ್ಧಿಸಬಹುದಾಗಿದೆ.
ಆಸ್ಕರ್‌ನ ಜನರಲ್ ಕ್ಯಾಟಗರಿಯಲ್ಲಿ ಸೂರರೈ ಪೋಟ್ರು ಸ್ಪರ್ಧಿಸಿದ್ದು, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಬರಹಗಾರ (ಕಥೆ) ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧಿಸಿದೆ. ನಾಮನಿರ್ದೇಶನ ಹಾಗೂ ಮತ ನೀಡುವ ಪ್ರಕ್ರಿಯೆಗೆ ಪೂರಕವಾಗಿ ಇಂದಿನಿಂದ ಅಕಾಡೆಮಿಯ ಸದಸ್ಯರು ಚಿತ್ರದ ವೀಕ್ಷಣೆ ಮಾಡಲಿದ್ದಾರೆ.
2021ರ ಮಾರ್ಚ್ 15ರಂದು ನಾಮನಿರ್ದೇಶನ ಪಟ್ಟಿ ಪ್ರಕಟವಾಗಲಿದೆ.
ಸುಧಾ ಕೊಂಗರ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಸಿನಿಮಾ ಜನರಿಂದ ಮೆಚ್ಚುಗೆ ಗಳಿಸಿದೆ. ಅಪರ್ಣ ಬಾಲಮುರಳಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರೆ, ಜಿ.ವಿ.ಪ್ರಕಾಶ್ ಸಂಗೀತ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.