ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂರರೈ ಪೊಟ್ರು’ ಸಿನಿಮಾ: ಬಿಡುಗಡೆಗೂ ಮೊದಲೇ ₹ 100 ಕೋಟಿ ಬ್ಯುಸಿನೆಸ್‌!

ಕ್ಯಾಪ್ಟನ್‌ ಜಿ.ಆರ್. ಗೋಪಿನಾಥ್‌ ಜೀವನಚರಿತ್ರೆ ಕುರಿತ ಸಿನಿಮಾ
Last Updated 28 ಆಗಸ್ಟ್ 2020, 7:51 IST
ಅಕ್ಷರ ಗಾತ್ರ

ಕ್ಯಾಪ್ಟನ್ ಜಿ.ಆರ್‌. ಗೋಪಿನಾಥ್‌ ಅವರ ಜೀವನಚರಿತ್ರೆ ಕುರಿತ ‘ಸೂರರೈ ಪೊಟ್ರು’ ಚಿತ್ರ ಅಕ್ಟೋಬರ್‌ 30ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಸುಧಾ ಕೊಂಗಾರ.

ಗೋಪಿನಾಥ್ ಕನ್ನಡ ಮಾಧ್ಯಮದಲ್ಲಿಯೇ ವಿದ್ಯಾಭ್ಯಾಸ ಮಾಡಿ ಸೇನೆಗೆ ಸೇರಿ ‘ಕ್ಯಾಪ್ಟನ್ ಗೋಪಿನಾಥ್’ ಆಗುತ್ತಾರೆ. ಬಳಿಕ ಸೇನೆಯಿಂದ ವಾಪಸ್‌ ಬಂದು ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆ ಆರಂಭಿಸುತ್ತಾರೆ. ಕಡಿಮೆ ವೆಚ್ಚದಲ್ಲಿ ವಿಮಾನಯಾನ ಎಂಬ ಹೊಸ ಪರಿಕಲ್ಪನೆ ಹುಟ್ಟುಹಾಕಿದ್ದು ಅವರು ಹಿರಿಮೆ. ಅವರ ಜೀವನಚರಿತ್ರೆ ಕುರಿತ ಈ ಚಿತ್ರದಲ್ಲಿ ಗೋಪಿನಾಥ್ ಪಾತ್ರಕ್ಕೆ ಬಣ್ಣ ಹಚ್ಚಿರುವುದು ತಮಿಳು ನಟ ಸೂರ್ಯ.

ತಮಿಳು ಮತ್ತು ಹಿಂದಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಕನ್ನಡಕ್ಕೂ ಡಬ್‌ ಆಗಿ ಬಿಡುಗಡೆಯಾಗುತ್ತಿದೆ. ಥಿಯೇಟರ್‌ನಲ್ಲಿಯೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಇದಕ್ಕೆ ಕೋವಿಡ್‌–19 ಬಿಸಿ ತಟ್ಟಿತು. ಹಾಗಾಗಿ, ಈಗ ಒಟಿಟಿ ಮೂಲಕ ಬಿಡುಗಡೆಗೆ ನಿರ್ಧರಿಸಿದೆ.

ಅಂದಹಾಗೆ ‘ಸೂರರೈ ಪೊಟ್ರು’ ಬಿಡುಗಡೆಗೂ ಮೊದಲೇ ಎಷ್ಟು ಲಾಭ ಗಳಿಕೆ ಮಾಡಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಈ ಸಿನಿಮಾ ಸುಮಾರು ₹ 100 ಕೋಟಿ ಬ್ಯುಸಿನೆಸ್‌ ಮಾಡಿದೆ ಎಂಬುದು ಸೂರ್ಯ ಅವರ ಅಭಿಮಾನಿಗಳ ಲೆಕ್ಕಾಚಾರ. ಈ ಕುರಿತು ಸೂರ್ಯ ಫ್ಯಾನ್ಸ್ ಕ್ಲಬ್ ಟ್ವಿಟರ್‌ನಲ್ಲಿ ಮಾಹಿತಿಯನ್ನೂ ಹಂಚಿಕೊಂಡಿದೆ.

ಕ್ಲಬ್‌ನ ಮಾಹಿತಿ ಪ್ರಕಾರ ₹ 45 ಕೋಟಿ ಮೊತ್ತಕ್ಕೆ ಅಮೆಜಾನ್‌ ಪ್ರೈಮ್‌ ಈ ಸಿನಿಮಾವನ್ನು ಖರೀದಿಸಿದೆ. ತಮಿಳು ಮತ್ತು ತೆಲುಗಿನ ಸ್ಯಾಟಲೈಟ್‌ ಹಕ್ಕುಗಳಿಂದ ₹ 20 ಕೋಟಿ ಲಾಭ ಸಿಕ್ಕಿದೆ. ಹಿಂದಿಗೂ ಇದು ರಿಮೇಕ್‌ ಆಗುತ್ತಿದ್ದು, ನಟ ಶಾಹಿದ್‌ ಕಪೂರ್‌ ನಟಿಸಲಿದ್ದಾರೆ. ಹಿಂದಿಯ ಡಬ್ಬಿಂಗ್‌ ಮತ್ತು ರಿಮೇಕ್‌ ರೂಪದಲ್ಲಿ ₹ 20 ಕೋಟಿ ಬಂದಿದೆ. ವಿದೇಶದಲ್ಲಿ ಈ ಸಿನಿಮಾದ ವಿತರಣೆಯ ಹಕ್ಕಿನ ರೂಪದಲ್ಲಿ ₹ 15 ಕೋಟಿಗೂ ಹೆಚ್ಚು ಲಾಭ ಸಿಕ್ಕಿದೆಯಂತೆ. ಇದು ಸೂರ್ಯ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT