ಶುಕ್ರವಾರ, ಜೂನ್ 18, 2021
23 °C

ನಟಿ ತಮನ್ನಾ ಅಮ್ಮ–ಅಪ್ಪನಿಗೆ ಕೋವಿಡ್‌–19 ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮ್ಮ ಮತ್ತು ಅಪ್ಪನ ಜೊತೆಗೆ ನಟಿ ತಮನ್ನಾ ಭಾಟಿಯಾ

ನಟಿ ತಮನ್ನಾ ಭಾಟಿಯಾ ಅವರ ತಂದೆ ಮತ್ತು ತಾಯಿಗೆ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ. ತಮನ್ನಾ ಅವರೇ ಈ ಕುರಿತು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

‘ಅಪ್ಪ ಸಂತೋಷ್‌ ಭಾಟಿಯಾ ಮತ್ತು ಅಮ್ಮ ರಜನಿ ಭಾಟಿಯಾಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ನನ್ನ ಪೋಷಕರು ಚೇತರಿಸಿಕೊಳ್ಳುವಂತೆ ದೇವರಲ್ಲಿ ಅಭಿಮಾನಿಗಳು ಪ್ರಾರ್ಥಿಸಿ’ ಎಂದು ಅವರು ಕೋರಿದ್ದಾರೆ.

ತಮನ್ನಾ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ ಇಂತಿದೆ: ‘ಕಳೆದ ವಾರಾಂತ್ಯದಲ್ಲಿ ನನ್ನಪ್ಪ, ಅಮ್ಮನಿಗೆ ಕೋವಿಡ್‌ ಲಕ್ಷಣಗಳು ಸಣ್ಣದಾಗಿ ಗೋಚರಿಸಿದ್ದವು. ಮುಂಜಾಗ್ರತೆಯಾಗಿ ಅವರನ್ನು ವೈದ್ಯಕೀಯ ತಪಾಸಣೆ ಒಳಪಡಿಸಲಾಯಿತು. ಅವರಿಗೆ ಕೋವಿಡ್‌ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ’ ಎಂದು ತಿಳಿಸಿದ್ದಾರೆ.

‘ನಾನು ಸೇರಿದಂತೆ ಕುಟುಂಬದ ಉಳಿದ ಸದಸ್ಯರು, ಮನೆ ಕೆಲಸದ ಸಿಬ್ಬಂದಿಗೆ ಕೋವಿಡ್‌ ನೆಗೆಟಿವ್‌ ಬಂದಿದೆ. ದೇವರ ಅನುಗ್ರಹದಿಂದ ಅಪ್ಪ, ಅಮ್ಮ ಕೂಡ ಇದರಿಂದ ಚೇತರಿಸಿಕೊಳ್ಳಲಿದ್ದಾರೆ. ಅಭಿಮಾನಿಗಳ ಪ್ರಾರ್ಥನೆಯು ಅವರು ಚೇತರಿಕೆಯ ಹಾದಿಗೆ ಮರಳಲು ನೆರವಾಗಲಿದೆ’ ಎಂದಿದ್ದಾರೆ ತಮನ್ನಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು