ಬುಧವಾರ, ಆಗಸ್ಟ್ 4, 2021
21 °C

ಪ್ರಭಾಸ್ ಟಾಲಿವುಡ್‌ನ ಮಿಸ್ಸಿಂಗ್ ಸ್ಟಾರ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಬ್ಬ ನಟ ಒಮ್ಮೆ ಸ್ಟಾರ್ ಎನ್ನಿಸಿಕೊಂಡರೆ ಸಾಕು ಅಭಿಮಾನಿಗಳ ಬಳಗವೇ ಹುಟ್ಟಿಕೊಳ್ಳುತ್ತದೆ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಲೇ ಇರಬೇಕು. ಸಿನಿಮಾ ಹಿಟ್‌ ಆಗುವುದು, ಹಣ ಗಳಿಸುವುದು ಅವರಿಗೆ ದೊಡ್ಡ ವಿಷಯವಲ್ಲ. ನೆಚ್ಚಿನ ನಟನನ್ನು ಪರದೆ ಮೇಲೆ ಕಾಣಬೇಕು ಎಂಬುದಷ್ಟೇ ಅವರ ಮನಸ್ಸಿನಲ್ಲಿರುತ್ತದೆ. ಆದರೆ ಟಾಲಿವುಡ್‌ನಲ್ಲೊಬ್ಬ ನಟ ಇತ್ತೀಚೆಗೆ ಮಿಸ್ಸಿಂಗ್‌ ಸ್ಟಾರ್ ಎನ್ನಿಸಿಕೊಂಡಿದ್ದಾರೆ. ಯಾರಪ್ಪಾ ಆ ಮಿಸ್ಸಿಂಗ್ ಸ್ಟಾರ್ ಎನ್ನುತ್ತೀರಾ? ಅವರೇ ಬಾಹುಬಲಿ ಖ್ಯಾತಿಯ ಪ್ರಭಾಸ್‌.

2013‌ರಲ್ಲಿ ಬಿಡುಗಡೆಯಾದ ‘ಮಿರ್ಚಿ’ ಸಿನಿಮಾದಿಂದ ಹಿಡಿದು 2020ರವರೆಗೂ ಪ್ರಭಾಸ್ ಒಂದು ವರ್ಷಕ್ಕೆ ಒಂದು ಸಿನಿಮಾ ನೀಡಿದರೆ ಇನ್ನೊಂದು ವರ್ಷ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿರಲಿಲ್ಲ. ಒಂದು ವರ್ಷ ಪೂರ್ತಿ ಯಾವುದೇ ಸಿನಿಮಾ ಬಿಡುಗಡೆಯಾಗದೇ ಅಭಿಮಾನಿಗಳು ನಿರಾಸೆಗೊಳ್ಳುತ್ತಿದ್ದರು.

2013ರಲ್ಲಿ ‘ಮಿರ್ಚಿ’ ಸಿನಿಮಾ ಬಿಡುಗಡೆಯಾದ ನಂತರ 2015ರಲ್ಲಿ ‘ಬಾಹುಬಲಿ ಭಾಗ 1’ ಬಿಡುಗಡೆಯಾಗಿತ್ತು. ನಂತರ 2017ರಲ್ಲಿ ‘ಬಾಹುಬಲಿ ಭಾಗ 2’ ಬಿಡುಗಡೆಯಾಗಿತ್ತು. 2019ರಲ್ಲಿ ‘ಸಾಹೊ’ ತೆರೆ ಕಂಡಿತ್ತು. ಹೀಗೆ 2014, 2016, 2018ರಲ್ಲಿ ಪ್ರಭಾಸ್ ಸಿನಿಮಾಗಳ ಸುದ್ದಿ ಇರುತ್ತಿರಲಿಲ್ಲ. ಆ ಕಾರಣಕ್ಕೆ ಪ್ರಭಾಸ್‌ಗೆ ಮಿಸ್ಸಿಂಗ್ ಸ್ಟಾರ್ ಎಂದು ಕರೆಯಲಾಗುತ್ತಿದೆ.

ಈಗ 2020ರಲ್ಲಿ ಮತ್ತೆ ಮಿಸ್ ಆಗಿದ್ದಾರೆ ಪ್ರಭಾಸ್‌. ಈಗಂತು ಕೊರೊನಾ ಬಿಕ್ಕಟ್ಟಿನ ಕಾರಣದಿಂದ ಶೂಟಿಂಗ್‌ಗೂ ಬ್ರೇಕ್‌ ಹಾಕಲಾಗಿದೆ. ಆ ಕಾರಣಕ್ಕೆ 2020ರಲ್ಲೂ ಪ್ರಭಾಸ್ ಸಿನಿಮಾ ಬಿಡುಗಡೆಯಾಗುವುದು ಅನುಮಾನವೇ ಆಗಿದೆ. ಸದ್ಯಕ್ಕೆ ಪ್ರಭಾಸ್ ’ರಾಧೆ ಶ್ಯಾಮ’ ಚಿತ್ರದಲ್ಲಿ ನಟಿಸುತ್ತಿದ್ದು ಈ ಸಿನಿಮಾವೂ 2021ರ ಮಧ್ಯಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಅಷ್ಟೇ ಅಲ್ಲದೇ ನಾಗ್ ಅಶ್ವಿನ್‌ ಅವರ ’ಸ್ಕೀ ಫೈ’ ಸಿನಿಮಾವು ಮುಂದಿನ ವರ್ಷ ಸೆಟ್ಟೆರಲಿದ್ದು ಇದು ಕೂಡ  2022ರಲ್ಲಿ ಬಿಡುಗಡೆಯಾಗುವುದು ಅನುಮಾನವಾಗಿದೆ. ಆ ಕಾರಣಕ್ಕೆ ಪ‍್ರಭಾಸ್ ಸಿನಿಮಾ ಬಿಡುಗಡೆಯ ವಿಚಾರದಲ್ಲಿ ಚುರುಕಾಗಬೇಕು ಹಾಗೂ ಅದಕ್ಕೆ ತಕ್ಕಂತೆ ತಯಾರಿ ನಡೆಸಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು