ಶನಿವಾರ, ಏಪ್ರಿಲ್ 1, 2023
33 °C

IMDB ರೇಟಿಂಗ್: ಅಗ್ರ 10ರಲ್ಲಿ ಬಾಲಿವುಡ್‌ನ ಒಂದು, ಕನ್ನಡದ ಮೂರು ಸಿನಿಮಾಗಳು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

2022ರಲ್ಲಿ ಅತ್ಯುತ್ತಮ ರೇಟಿಂಗ್‌ ಪಡೆದ 10 ಚಿತ್ರಗಳ ಪಟ್ಟಿಯನ್ನು ಐಎಂಡಿಬಿ (ಇಂಟರ್‌ನೆಟ್‌ ಮೂವಿ ಡಾಟಾಬೇಸ್) ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಈ ಪಟ್ಟಿಯಲ್ಲಿ ಕನ್ನಡ, ತೆಲುಗಿನ ಮತ್ತು ತಮಿಳಿನ ತಲಾ ಮೂರು ಚಿತ್ರಗಳು ಸ್ಥಾನ ಪಡೆದಿದ್ದು, ಹಿಂದಿಯ ಒಂದೇ ಒಂದು ಸಿನಿಮಾ ಕಾಣಿಸಿಕೊಂಡಿದೆ.

ತೆಲುಗು ನಿರ್ದೇಶನದ ಎಸ್‌.ಎಸ್‌. ರಾಜಮೌಳಿ ಅವರ 'ಆರ್‌ಆರ್‌ಆರ್‌' (ರಣಂ ರೌದ್ರಂ ರುಧಿರಂ) ಸಿನಿಮಾ ಮೊದಲ ಸ್ಥಾನದಲ್ಲಿದ್ದು, ವಿವೇಕ್‌ ಅಗ್ನಿಹೋತ್ರಿ ಅವರ ಹಿಂದಿ ಸಿನಿಮಾ 'ದಿ ಕಾಶ್ಮೀರ್‌ ಫೈಲ್ಸ್‌' ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಐಎಂಡಿಬಿಯು ತನ್ನ ವೆಬ್‌ಸೈಟ್‌ನಲ್ಲಿ ನೆಟ್ಟಿಗರು ನೀಡುವ ಪ್ರತಿಕ್ರಿಯೆ ಆಧರಿಸಿ ಸಿನಿಮಾಗಳ ಜನಪ್ರಿಯತೆಯನ್ನು ನಿರ್ಧರಿಸುತ್ತದೆ.

ಐಎಂಡಿಬಿ ಬಿಡುಗಡೆ ಮಾಡಿರುವ 2022ರ ಅಗ್ರ ಹತ್ತು ಜನಪ್ರಿಯ ಸಿನಿಮಾಗಳು
1. ಆರ್‌ಆರ್‌ಆರ್‌ – ತೆಲುಗು (ಟಾಲಿವುಡ್‌)
2. ದಿ ಕಾಶ್ಮೀರ್‌ ಫೈಲ್ಸ್ – ಹಿಂದಿ (ಬಾಲಿವುಡ್‌)
3. ಕೆಜಿಎಫ್‌: ಚಾಪ್ಟರ್‌ 2 – ಕನ್ನಡ (ಸ್ಯಾಂಡಲ್‌ವುಡ್‌)
4. ವಿಕ್ರಂ – ತಮಿಳು (ಕಾಲಿವುಡ್‌)
5. ಕಾಂತಾರ – ಕನ್ನಡ (ಸ್ಯಾಂಡಲ್‌ವುಡ್‌)
6. ರಾಕೆಟ್ರಿ: ದಿ ನಂಬಿ ಎಫೆಕ್ಟ್‌ – ತಮಿಳು (ಕಾಲಿವುಡ್‌)
7. ಮೇಜರ್‌ (ಬಯೋಪಿಕ್‌) – ತೆಲುಗು (ಟಾಲಿವುಡ್‌)
8. ಸೀತಾ ರಾಮಮ್‌ – ತೆಲುಗು (ಟಾಲಿವುಡ್‌)
9. ಪೊನ್ನೀಯನ್‌ ಸೆಲ್ವನ್‌: ಭಾಗ 1 – ತಮಿಳು (ಕಾಲಿವುಡ್‌)
10. 777 ಚಾರ್ಲಿ – ಕನ್ನಡ (ಸ್ಯಾಂಡಲ್‌ವುಡ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು