ಕಿರಣ್ ಸುಬ್ರಮಣಿ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಎಜಿಎಸ್ ಪ್ರೊಡಕ್ಷನ್ ಬಂಡವಾಳ ಹೂಡಿದೆ. ‘ಸಿ’ ಎಂಬುದಕ್ಕೆ ಸಿನಿಮಾದಲ್ಲಿ ಮೂರು ಅರ್ಥವಿದೆ. ಆದರೆ ಟ್ರೇಲರಿನಲ್ಲಿ ಒಂದು ‘ಸಿ’ ಬಗ್ಗೆ ಮಾತ್ರವೇ ತೋರಿಸಿದ್ದೀವಿ. ಮತ್ತೆರಡು ‘ಸಿ’ ಏನು ಹೇಳುತ್ತದೆ, ಅದರ ಅರ್ಥವೇನು ಎಂಬುದನ್ನು ಚಿತ್ರಮಂದಿರಕ್ಕೆ ಬಂದು ನೋಡಬೇಕು. ಸಸ್ಪೆನ್ಸ್, ಎಮೋಷನ್ಸ್, ಥ್ರಿಲ್ಲರ್ ಹೀಗೆ ಎಲ್ಲ ಥರದ ಮನರಂಜನೆ ಅಂಶಗಳೂ ಈ ಸಿನಿಮಾದಲ್ಲಿದೆ’ ಎಂದರು ನಿರ್ದೇಶಕರು.