ಬೆಂಗಳೂರು: ದೇಶ, ಭಾಷೆಗಳ ಗಡಿ ಮೀರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಜೇಮ್ಸ್ ಕೆಮರೂನ್ ನಿರ್ದೇಶನದ ಹಾಲಿವುಡ್ ಚಿತ್ರ ‘ಟೈಟಾನಿಕ್’. ಹರೆಯದ ಮನಸುಗಳ ಪ್ರೇಮ, ಎದ್ದು ಕಾಣುವ ಸಿರಿತನ- ಬಡತನಗಳ ಅಂತರ, ಮನುಷ್ಯತ್ವ.. ಹೀಗೆ ಪ್ರತಿಯೊಬ್ಬರಿಗೂ ಈ ಚಿತ್ರ ಇಷ್ಟವಾಗಲು ಕಾರಣಗಳು ಇದ್ದವು.
ಇಂತಹ ಬ್ಲಾಕ್‌ಬಸ್ಟರ್ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಟೈಟಾನಿಕ್ ಸಿನಿಮಾ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಚಿತ್ರಮಂದಿರಗಳಲ್ಲಿ ಮಾತ್ರ ಮರು ಬಿಡುಗಡೆ ಆಗುತ್ತಿದೆ.
ಹೌದು, ಫೆಬ್ರವರಿ 10 ರಂದು ಟೈಟಾನಿಕ್ ಎಂಬ ಅಪೂರ್ವ ಸಿನಿಮಾ 4ಕೆ 3ಡಿಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ 20th ಸೆಂಚುರಿಸ್ ಸ್ಟುಡಿಯೋಸ್ ತಿಳಿಸಿದೆ. ಚಿತ್ರರಸಿಕರ ಮನಮಾಸದ ಈ ಸಿನಿಮಾವನ್ನು ಇದೀಗ ಮತ್ತೆ ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳುವ ಕಾಲ ಬಂದಿದೆ.
ಈ ಹಿನ್ನೆಯಲ್ಲಿಯಲ್ಲಿ ಚಿತ್ರದ 4ಕೆ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆಯಾಗಿವೆ.
Celebrate the 25th anniversary of the timeless love story.#Titanic returns to the big screen in remastered 4K 3D on February 10. pic.twitter.com/QCPxKgyqUW
— 20th Century Studios (@20thcentury) January 10, 2023
ನೈಜ ಘಟನೆ ಆಧರಿಸಿ ಟೈಟಾನಿಕ ಚಿತ್ರವನ್ನು ನಿರ್ಮಿಸಲಾಗಿತ್ತು. ಟೈಟಾನಿಕ ಎಂಬ ದುರಂತ ಹಡಗಿನಲ್ಲಿ ನಡೆಯುವ ಒಂದು ಅದ್ಭುತ ಪ್ರೇಮಕಥೆಯನ್ನು ಚಿತ್ರ ಹೊಂದಿತ್ತು. 1997 ರಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಿ ಜಾಗತಿಕ ಸಿನಿಮಾರಂಗದಲ್ಲೇ ಧೂಳೆಬ್ಬಿಸಿತ್ತು.
ಹಡುಗಿನಲ್ಲಿ ಜಾಕ್ (ಲಿಯೋನಾರ್ಡೊ ಡಿಕ್ಯಾಫ್ರಿಯೋ) ಮತ್ತು ರೋಸ್ (ಕೇಟ್ ವಿನ್ಸ್‌ಲೆಟ್) ನಡುವೆ ನಡೆಯುವ ಪ್ರೇಮ, ಅದಕ್ಕೆ ರೋಸ್ ಫೋಷಕರ ವಿರೋಧ ಕೊನೆಗೆ ನಡೆಯುವ ಹಡಗಿನ ದುರಂತದಲ್ಲಿ ಮನಮಿಡಿಯುವ ಅಂತ್ಯವನ್ನು ನಿರ್ದೇಶಕ ಕೆಮರೂನ್ ಸೊಗಸಾಗಿ ಕಟ್ಟಿಕೊಟ್ಟಿದ್ದರು.
ಜೇಮ್ಸ್ ಕೆಮರೂನ್ ಅವರ ಅವತಾರ್ 2 ಸಿನಿಮಾ ಪ್ರಯುಕ್ತ ಸೆಪ್ಟೆಂಬರ್‌ನಲ್ಲಿ ಅವತಾರ್ ಸಿನಿಮಾ ಕೂಡ ಮರು ಬಿಡುಗಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.