ಸೋಮವಾರ, ಜನವರಿ 27, 2020
16 °C

ಕ್ರ್ಯಾಕ್ ಮೇಲೆ ರವಿತೇಜ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಂದು ಕಾಲದಲ್ಲಿ ತೆಲುಗಿನ ಸ್ಟಾರ್‌ ಹೀರೊಗಳ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದ ರವಿತೇಜ ಕೆಲ ದಿನಗಳಿಂದ ಸುದ್ದಿಯಲ್ಲಿರಲಿಲ್ಲ. ತಮ್ಮ ಆ್ಯಕ್ಷನ್–ಕಾಮಿಡಿ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಈ ನಟ ತೆಲುಗಿನಲ್ಲಿ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದವರು. ‘ನೀ ಕೋಸಮೆ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದವರು.

ತೆಲುಗಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿಯೂ ಇವರಿಗಿದೆ. 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ನಟ ಕನ್ನಡದ ‘ವಂದೇಮಾತರಂ’ ಹಾಗೂ ‘ವಜ್ರಕಾಯ’ ಸಿನಿಮಾದಲ್ಲೂ ನಟಿಸಿದ್ದರು.

2015ರಲ್ಲಿ ತೆರೆಕಂಡ ಸಂಪತ್ ನಂದಿ ನಿರ್ದೇಶನದ ಆ್ಯಕ್ಷನ್–ಕಾಮಿಡಿ ಚಿತ್ರ ‘ಬೆಂಗಾಲ್‌ ಟೈಗರ್‌’ ರವಿತೇಜಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸಿನಿಮಾದಲ್ಲಿ ತಮನ್ನಾ ಹಾಗೂ ರಾಶಿ ಖನ್ನಾ ಇವರಿಗೆ ಜೋಡಿಯಾಗಿ ನಟಿಸಿದ್ದರು. 2018ರ ‘ಅಮರ್ ಅಕ್ಬರ್ ಅಂಥೋನಿ’ ನಂತರ ಇವರ ಯಾವುದೇ ಸಿನಿಮಾಗಳು ತೆರೆ ಕಂಡಿರಲಿಲ್ಲ. ಸದ್ಯ ‘ಡಿಸ್ಕೊ ರಾಜಾ’ ಹಾಗೂ ‘ಕ್ರ್ಯಾಕ್‌’ ಸಿನಿಮಾಗಳು ಇವರ ಕೈಯಲ್ಲಿವೆ.

ಯಶಸ್ವಿ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಗೋಪಿಚಂದ್ ಮಾಲಿನೇನಿ ನಿರ್ದೇಶನದ ‘ಕ್ರ್ಯಾಕ್’ ಸಿನಿಮಾದ ಮೇಲೆ ರವಿತೇಜ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರವಿತೇಜ ಅವರಿಗೆ ಶ್ರುತಿ ಹಾಸನ್ ಜೊತೆಯಾಗಲಿದ್ದಾರೆ.

ಹೊಸ ವರ್ಷ ಸ್ವಾಗತಿಸುವ ಸಂಭ್ರಮದೊಂದಿಗೆ ‘ಕ್ರ್ಯಾಕ್’ ಸಿನಿಮಾದ ಮೊದಲ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರದ ಪೋಸ್ಟರ್‌ನಲ್ಲಿ ರವಿತೇಜ ರಗಡ್‌ ಲುಕ್‌ನ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು