ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಪ್ರಯುಕ್ತ ನಟನ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಚಿತ್ರರಂಗದ ಸೇರಿದಂತೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರಿ, ರಾಯನ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ನಟ ಕಿಚ್ಚ ಸುದೀಪ್ ಪೋಸ್ಟ್ ಹಂಚಿಕೊಂಡಿದ್ದರು. ‘ಗುರಿಯತ್ತ ಸಾಗಲು ಯಾವಾಗಲೂ ಬಹಳಷ್ಟು ಸಮಯ ಬೇಕಾಗುತ್ತದೆ. ನಿಮ್ಮ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಹತ್ತಿರಕ್ಕೆ ಕೊಂಡೊಯ್ಯಲಿ, ಗುರಿಯಡೆಗೆ ನಿಮ್ಮ ಗಮನ ಇಟ್ಟಿದ್ದೀರಿ, ಶುಭವಾಗಲಿ‘ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
.ISRO: ಪಿಎಸ್ಎಲ್ವಿ–ಸಿ 62 ರಾಕೆಟ್ ಉಡಾವಣೆಗೆ ಶ್ರೀಹರಿಕೋಟಾದಲ್ಲಿ ಕ್ಷಣಗಣನೆ.PV Web Exclusive: ‘ಮ್ಯಾಂಚೆಸ್ಟರ್’ ಕನವರಿಕೆಯಲ್ಲಿ ಮಧ್ಯ ಕರ್ನಾಟಕ.
ಇದಕ್ಕೆ ಯಶ್ ಕೂಡ ಪ್ರತಿಕ್ರಿಯಿಸಿದ್ದು, 'ಧನ್ಯವಾದಗಳು ಸರ್, ನಾನು ನಿಮ್ಮಂತಹ ಹಿರಿಯರಿಂದಲೇ ಕಲಿತೆ, ಗಮನ, ಪ್ರಾಮಾಣಿಕತೆ ಮತ್ತು ಧೈರ್ಯದಿಂದಲೇ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಉನ್ನತೀಕರಿಸಲು ಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಯಶ್ ಮತ್ತು ಸುದೀಪ್ ಅವರ ಪ್ರತಿಕ್ರಿಯೆಗಳು ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಅವರ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
.ಜಗತ್ತಿನ ಎಲ್ಲ ಸಂಘರ್ಷಗಳಿಗೆ ಕಾರಣ ತಿಳಿಸಿದ ದೋಬಾಲ್.Iran Protest | ಅಮೆರಿಕ ದಾಳಿ ನಡೆಸಿದರೆ ಪ್ರತಿದಾಳಿ: ಇರಾನ್ ಎಚ್ಚರಿಕೆ.
ವಿಭಿನ್ನ ಲುಕ್ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ಯಶ್ ಜೊತೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಹಾಲಿವುಡ್ ನಟಿ ನಟಾಲಿಯಾ ಬರ್ನ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ.

ಗೀತು ಮೋಹನ್ದಾಸ್ ಅವರು ಟಾಕ್ಸಿಕ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ‘ಟಾಕ್ಸಿಕ್’ನಲ್ಲಿ ನಟನಾಗಿ, ಸಹ–ಬರಹಗಾರರಾಗಿ, ಸಹ–ನಿರ್ಮಾಪಕನಾಗಿ ಯಶ್ ಹೊಸ ಹೆಜ್ಜೆ ಇಟ್ಟಿದ್ದಾರೆ. ವೆಂಕಟ್ ಕೆ.ನಾರಾಯಣ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಾನ್ಸ್ಟರ್ಮೈಂಡ್ ಕ್ರಿಯೇಷನ್ಸ್ನಡಿ ಯಶ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ‘ಕೆ.ಜಿ.ಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ.
.ಫ್ಯಾಕ್ಟ್ ಚೆಕ್: ಪಶ್ಚಿಮ ಬಂಗಾಳದಲ್ಲಿ ದೇವಿ ವಿಗ್ರಹಗಳನ್ನು ಒಡೆದು ಹಾಕಿಲ್ಲ.ಕೊಲೆಗೂ ಮುನ್ನ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ.14ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್ಷಿಪ್: ಕರ್ನಾಟಕಕ್ಕೆ 11 ಪದಕ.ಉತ್ತರ ಪ್ರದೇಶದಲ್ಲಿ ಜೋಡಿ ಕೊಲೆ: ಇಬ್ಬರ ಬದುಕಿಗೆ ಮುಳುವಾದ ಪ್ರೀತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.