ಮಂಗಳವಾರ, ಆಗಸ್ಟ್ 16, 2022
29 °C

‘ಗಮ್ಜಾಲ್‌’ ಚಿತ್ರ ಫೆ.19ರಂದು ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಗಿರಿಗಿಟ್‌’ ಖ್ಯಾತಿಯ ರೂಪೇಶ್‌ ಶೆಟ್ಟಿ ತಂಡದ ಮತ್ತೊಂದು ಬಹುನಿರೀಕ್ಷಿತ ‘ಗಮ್ಜಾಲ್‌’ ತುಳು ಚಿತ್ರ ಫೆ. 19ರಂದು ಕರಾವಳಿಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಒಂದು ವರ್ಷದ ನಂತರ ಬಿಡುಗಡೆಯಾಗಲಿರುವ ಮೊದಲ ತುಳು ಸಿನಿಮಾ ಇದಾಗಿದೆ. ಲಾಕ್‌ಡೌನ್‌ ಬಳಿಕ ಕರಾವಳಿಯ ಬಹುತೇಕ ಚಿತ್ರಮಂದಿರಗಳು ಸ್ತಬ್ಧವಾಗಿತ್ತು. ಗಮ್ಜಾಲ್‌ ಸಿನಿಮಾದ ಮೂಲಕ ಮತ್ತೆ ಒಂಟಿ ಪರದೆಯ ಥಿಯೇಟರ್‌ಗಳಲ್ಲಿ ಚಟುವಟಿಕೆಗಳು ಗರಿಗೆದರಲಿವೆ.

ಈ ಚಿತ್ರಕ್ಕೆ ಸುಮನ್‌ ಸುವರ್ಣ ಮತ್ತು ನವೀನ್‌ ಶೆಟ್ಟಿ ಆ್ಯಕ್ಷನ್‌ಕಟ್‌ ಹೇಳಿದ್ದಾರೆ. ರೂಪೇಶ್‌ ಶೆಟ್ಟಿ ಅವರ ಚಿತ್ರಕಥೆಗೆ ಪ್ರಸನ್ನ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ. ಶೂಲಿನ್‌ ಫಿಲ್ಮ್ಸ್‌ ಮತ್ತು ಮೊಗರೋಡಿ ಕನ್‌ಸ್ಟ್ರಕ್ಷನ್ ಚಿತ್ರಕ್ಕೆ ಬಂಡವಾಳ ಹಾಕಿದೆ.

‘ಗಮ್ಜಾಲ್‌’ ಚಿತ್ರದಲ್ಲಿ ರೂಪೇಶ್‌ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ಕೋಸ್ಟಲ್‌ವುಡ್‌ನ ಹಿರಿಯ ಕಲಾವಿದರಾದ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ಉಮೇಶ್‌ ಮಿಜಾರ್‌, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.

ರೂಪೇಶ್‌ ಶೆಟ್ಟಿ ತಂಡದ ‘ಗಿರಿಗಿಟ್‌’ ಚಿತ್ರವೂ ತುಳು ಚಿತ್ರರಂಗದಲ್ಲಿ ಹಲವು ದಾಖಲೆ ನಿರ್ಮಿಸಿತ್ತು. ಇದೀಗ ಲಾಕ್‌ಡೌನ್‌ ನಂತರ ತಯಾರಾದ ‘ಗಮ್ಜಾಲ್‌’ ಸಿನಿಮಾ ತುಳುಚಿತ್ರ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು