ದೇಹ ಪ್ರದರ್ಶನ: ಮುಂಬೈ ಪೊಲೀಸರಿಂದ ಉರ್ಫಿ ಜಾವೇದ್‌ಗೆ ಬುಲಾವ್

ಮುಂಬೈ: ಸದಾ ವಿವಾದದಲ್ಲಿರುವ ಕಿರುತೆರೆ ನಟಿ ಉರ್ಫಿ ಜಾವೇದ್‌ರನ್ನು ಮುಂಬೈ ಪೊಲೀಸರು ಶನಿವಾರ ವಿಚಾರಣೆಗೆ ಕರೆದಿದ್ದಾರೆ.
ಮುಂಬೈನ ಬೀದಿಗಳಲ್ಲಿ ತಮ್ಮ ದೇಹವನ್ನು ಪ್ರದರ್ಶನ ಮಾಡಿಕೊಂಡು ಓಡಾಡುತ್ತಾರೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾರಾಷ್ಟ್ರ ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ದೂರು ನೀಡಿದ್ದರು. ಅಲ್ಲದೇ ಅವರ ದೇಹ ಪ್ರದರ್ಶನ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಸ್ತುವಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ವಾಘ್ ನೀಡಿದ ದೂರಿನ ಸಂಬಂಧ, ವಿಚಾರಣೆಗೆ ಹಾಜರಾಗುವಂತೆ ಉರ್ಫಿ ಜಾವೇದ್ ಅವರಿಗೆ ತಿಳಿಸಿದ್ದೇವೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
‘ಸಂವಿಧಾನ ಕೊಟ್ಟಿರುವ ನಡತೆ ಹಕ್ಕು, ಆಲೋಚನಾ ಸ್ವಾತಂತ್ರ್ಯ ಇಂತಹ ವಿಧ್ವಂಸಕ ಧೋರಣೆಯಲ್ಲಿ ಪ್ರಕಟವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅವರು ತಮ್ಮ ದೇಹ ಪ್ರದರ್ಶನ ಮಾಡಬೇಕಾದರೆ ನಾಲ್ಕು ಗೋಡೆಗಳ ಮಧ್ಯೆ ಮಾಡಲಿ. ಆವರ ವರ್ತನೆ ಸಮಾಜದ ವಿಕೃತ ಮನೋಭಾವಕ್ಕೆ ಉತ್ತೇಜನ ನೀಡುತ್ತದೆ ಎನ್ನುವ ಅರಿವು ಅವರಿಗೆ ಇದ್ದಂತಿಲ್ಲ‘ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.