ಮಂಗಳವಾರ, ಜನವರಿ 18, 2022
23 °C

ವಿಕ್ಕಿ ಕೌಶಲ್-ಕತ್ರೀನಾ ಕೈಫ್ ಮದುವೆ: ಸಂಗೀತ್ ಕಾರ್ಯಕ್ರಮಕ್ಕೆ ತಯಾರಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಬಾಲಿವುಡ್ ಅಂಗಳದಲ್ಲಿ ಈಗ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮದುವೆಯದ್ದೇ ಸದ್ದು..

ಮದುವೆ ನಡೆಯುವ ತಾಣ, ಮದುವೆ ಸಿದ್ಧತೆ ಮತ್ತು ಭಾಗವಹಿಸುವ ಅತಿಥಿಗಳು, ಹೀಗೆ ವಿವಿಧ ಸಂಗತಿಗಳ ಕುರಿತು ಚರ್ಚೆ ನಡೆಯುತ್ತಿದೆ.

ರಾಜಸ್ಥಾನದಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮದುವೆ ನಡೆಯಲಿದೆ ಎನ್ನಲಾಗಿದ್ದು, ಆದರೆ ಈ ಜೋಡಿ ವಿವಾಹದ ಕುರಿತು ಯಾವುದೇ ಬಹಿರಂಗ ಹೇಳಿಕೆ ನೀಡುತ್ತಿಲ್ಲ.

ಮದುವೆಗೂ ಮುನ್ನ ನಡೆಯಲಿರುವ ಸಂಗೀತ್ ಕಾರ್ಯಕ್ರಮವನ್ನು ಬಾಲಿವುಡ್‌ನ ಪ್ರಮುಖ ನಿರ್ದೇಶಕರಾಗಿರುವ ಕರಣ್ ಜೋಹರ್ ಮತ್ತು ಫರ್ಹಾ ಖಾನ್ ನೃತ್ಯ ನಿರ್ದೇಶನ ಮಾಡಲಿದ್ದಾರೆ ಎಂದು ‘ಪಿಂಕ್‌ವಿಲ್ಲಾ’ ವರದಿ ಮಾಡಿದೆ.

ಡಿಸೆಂಬರ್ 7ರಂದು ಸಂಗೀತ್ ನಡೆದರೆ, ಮತ್ತೆ ಡಿ. 9ರಂದು ಮದುವೆ ನಡೆಯಲಿದೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಕೇಳಿಬಂದಿದೆ.

ಆದರೆ ವಿವಾಹ ಕಾರ್ಯಕ್ರಮವನ್ನು ಅತ್ಯಂತ ಖಾಸಗಿ ಸಮಾರಂಭವಾಗಿ ನಡೆಸಲು ವಿಕ್ಕಿ-ಕತ್ರೀನಾ ಜೋಡಿ ಬಯಸಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು