ಬೇರ್ ಗ್ರಿಲ್ಸ್ ಇಂಟು ದಿ ವೈಲ್ಡ್ ಕಾರ್ಯಕ್ರಮದಲ್ಲಿ ವಿಕ್ಕಿ ಕೌಶಲ್

ಬೆಂಗಳೂರು: ಸರ್ದಾರ್ ಉಧಾಮ್ ಸಿಂಗ್ ಖ್ಯಾತಿಯ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ಬೇರ್ ಗ್ರಿಲ್ಸ್ ನಡೆಸಿಕೊಡುತ್ತಿರುವ ‘ಇಂಟು ದಿ ವೈಲ್ಡ್ಸ್ ವಿತ್ ಬೇರ್ ಗ್ರಿಲ್ಸ್’ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಶುಕ್ರವಾರ, ನವೆಂಬರ್ 12ರಂದು ಈ ಕಾರ್ಯಕ್ರಮ ಡಿಸ್ಕವರಿ ಪ್ಲಸ್ ಮೂಲಕ ಪ್ರಸಾರವಾಗಲಿದೆ.
ಈ ಕುರಿತ ಫಸ್ಟ್ ಲುಕ್ ಅನ್ನು ಡಿಸ್ಕವರಿ ಬಿಡುಗಡೆ ಮಾಡಿದೆ. ಜತೆಗೆ ನಟ ವಿಕ್ಕಿ ಕೌಶಲ್ ಕೂಡ ಬೇರ್ ಗ್ರಿಲ್ಸ್ ಕಾರ್ಯಕ್ರಮದ ಫಸ್ಟ್ ಲುಕ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮೊದಲು ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ನಟ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಭಾಗವಹಿಸಿದ್ದರು.
ಅಕ್ಷಯ್ ಕುಮಾರ್ ಕಾಲುಮುಟ್ಟಿ ನಮಸ್ಕರಿಸಿದ ಕತ್ರೀನಾ ಕೈಫ್!
2019ರಲ್ಲಿ ಬೇರ್ ಗ್ರಿಲ್ಸ್ ನಡೆಸಿಕೊಡುವ ‘ಮ್ಯಾನ್ ವರ್ಸಸ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಆ್ಯಂಡ್ ಪಿಎಂ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
ಕ್ಯಾನ್ಸರ್ ಪೀಡಿತರಿಗೆ ನೆರವಾಗಲು ತಲೆಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್ ಪುತ್ರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.