ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯದಲ್ಲಿ ಹುಟ್ಟುಹಬ್ಬ ಆಚರಣೆ: ನಗ್ನ ಚಿತ್ರಗಳನ್ನು ಹಂಚಿಕೊಂಡ ನಟ ವಿದ್ಯುತ್

Published 10 ಡಿಸೆಂಬರ್ 2023, 12:53 IST
Last Updated 10 ಡಿಸೆಂಬರ್ 2023, 12:53 IST
ಅಕ್ಷರ ಗಾತ್ರ

ನವದೆಹಲಿ: ನಟ ವಿದ್ಯುತ್ ಜಮ್ವಾಲ್ ಅವರು ಇಂದು (ಭಾನುವಾರ) 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ, ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ವಿದ್ಯುತ್ ಜಮ್ವಾಲ್ ಅವರು ಹಿಮಾಲಯದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜತೆಗೆ ನಗ್ನವಾಗಿ ಕಾಣಿಸಿಕೊಂಡಿರುವ ಹಲವು ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಿದ್ಯುತ್ ಕಳೆದ 14 ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಏಕಾಂಗಿಯಾಗಿಯೇ ಆಚರಿಸಿಕೊಳ್ಳುತ್ತಿದ್ದಾರೆ. ಜತೆಗೆ ಹುಟ್ಟುಹಬ್ಬ ಸಮೀಪಿಸುತ್ತಿದ್ದಂತೆ ನಟನೆಯಿಂದ ಬಿಡುವು ಮಾಡಿಕೊಂಡು ಒಂಟಿಯಾಗಿ ಪ್ರವಾಸ ಹೋಗುವ ಮೂಲಕ ಏಕಾಂತದಲ್ಲಿ ಕಾಲ ಕಳೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

‘ಪ್ರತಿ ವರ್ಷ 7-10 ದಿನಗಳನ್ನು ಏಕಾಂಗಿಯಾಗಿ ಕಳೆಯುವುದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಐಷಾರಾಮಿ ಜೀವನವನ್ನು ತೊರೆದು ಅರಣ್ಯಕ್ಕೆ ಬರುವಾಗ ನಾನು ನನ್ನ ಏಕಾಂತತೆಯನ್ನು ಕಂಡುಕೊಂಡಿದ್ದೇನೆ. ಈ ಜರ್ನಿಯಲ್ಲಿ ‘ನಾನು ಯಾರು ಅಲ್ಲ’ ಎಂದು ತಿಳಿದುಕೊಳ್ಳುವ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದನ್ನು ಆನಂದಿಸುತ್ತೇನೆ. ಇದು ‘ನಾನು ಯಾರು’ ಎಂದು ತಿಳಿದುಕೊಳ್ಳುವ ಮೊದಲ ಹಂತವಾಗಿದ್ದು, ಶಾಂತವಾಗಿ ನನ್ನನ್ನು ರಕ್ಷಿಸುತ್ತದೆ’ ಎಂದು ತಿಳಿಸಿದ್ದಾರೆ.

ಹಿಮಾಲಯದಲ್ಲಿ ನಾನು ನನ್ನನ್ನು ಸುತ್ತುವರಿಯಲು ಬಯಸುವ ಶಕ್ತಿಯನ್ನು ಪಡೆದುಕೊಳ್ಳುತ್ತೇನೆ. ಅದೇ ಶಕ್ತಿಯೊಂದಿಗೆ ಮನೆಗೆ ಹಿಂತಿರುಗುತ್ತೇನೆ. ಅದರಂತೆಯೇ ನನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಅನುಭವಿಸಲು ಸಿದ್ಧವಾಗಿರುತ್ತೇನೆ. ಈ ಏಕಾಂತವು ಮನಸ್ಸಿಗೆ ಅನೂಹ್ಯವಾದದ್ದಾಗಿದೆ. ಆದರೆ, ಅದು ಅರಿವಿನಲ್ಲಿ ಮಾತ್ರ ಅನುಭವಕ್ಕೆ ಬರುತ್ತದೆ ಎಂಬುದನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ತಮ್ಮ ಮುಂಬರುವ ಸಿನಿಮಾ ‘CRAKK’ 2024ರ ಫೆಬ್ರುವರಿ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT