ಬುಧವಾರ, ಜುಲೈ 6, 2022
23 °C

ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೊರ್ಸ್‌'ನಲ್ಲಿ ವಿವೇಕ್ ಒಬೆರಾಯ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್‌ ಪೊಲೀಸ್‌ ಫೋರ್ಸ್‌' ವೆಬ್ ಸೀರಿಸ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಸಿದ್ಧಾರ್ಥ್‌ ಮಲ್ಹೋತ್ರಾ ಕಾಣಿಸಿಕೊಳ್ಳಲಿದ್ದಾರೆ ಎಂದು ಇತ್ತೀಚೆಗಷ್ಟೇ ಘೋಷಿಸಲಾಗಿತ್ತು. ಈ ಸುದ್ದಿ ಬೆನ್ನಿಗೇ ಇದೀಗ, 'ಇಂಡಿಯನ್‌ ಪೊಲೀಸ್‌ ಫೋರ್ಸ್‌'ಗೆ ನಟ ವಿವೇಕ್‌ ಒಬೆರಾಯ್‌ ಎಂಟ್ರಿಕೊಟ್ಟಿದ್ದಾರೆ.

ಶಸ್ತ್ರಸಜ್ಜಿತ ಪೊಲೀಸ್‌ ಸಮವಸ್ತ್ರದಲ್ಲಿರುವ ಒಬೆರಾಯ್‌ ಅವರ ಚಿತ್ರವನ್ನು ಹಂಚಿಕೊಂಡಿರುವ ರೋಹಿತ್‌, 'ನಮ್ಮ ಪಡೆಯಲ್ಲಿರುವ ಅತ್ಯಂತ ಅನುಭವಿ ಹಿರಿಯ ಅಧಿಕಾರಿ' ಎಂದು ಪರಿಚಯಿಸಿದ್ದಾರೆ. ಹಾಗೆಯೇ, ವಿವೇಕ್‌ ಅವರಿಗೆ ಸ್ವಾಗತ ಕೋರಿದ್ದಾರೆ. ಈ ಪೋಸ್ಟ್‌ ಜೊತೆಗೆ ಅವರು #IndianPoliceForce ಮತ್ತು #filmingnow ಟ್ಯಾಗ್‌ಗಳನ್ನೂ ಬಳಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿವೇಕ್‌, 'ಧನ್ಯವಾದಗಳು ಸಹೋದರ. ಪ್ರತಿಕ್ಷಣವನ್ನೂ ಪ್ರೀತಿಸುತ್ತೇನೆ. ಕಳೆದ 20 ವರ್ಷಗಳಲ್ಲಿ ಈ ಮಟ್ಟದ ಆ್ಯಕ್ಷನ್‌ ಅನ್ನು ನಾನು ನೋಡಿಯೇ ಇಲ್ಲ. ನೀವು ನಿಜವಾದ ಮಾಸ್ಟರ್‌' ಎಂದು ಬರೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು