ಮಂಗಳವಾರ, ಜನವರಿ 28, 2020
21 °C

ವಿಜಯ್ ದೇವರಕೊಂಡ ಹೆಸರು ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರ್ಜುನ್‌ ರೆಡ್ಡಿ ಸಿನಿಮಾದ ಮೂಲಕ ಗಮನ ಸೆಳೆದ ನಟ ವಿಜಯ್ ದೇವರಕೊಂಡ ಅವರ ಮತ್ತೊಂದು ನಿರೀಕ್ಷಿತ ಸಿನಿಮಾ 'ವರ್ಲ್ಡ್ ಫೇಮಸ್ ಲವರ್' ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ವಿಜಯ್‌ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ಚಿತ್ರಕ್ಕಾಗಿ ವಿಜಯ್ ಹೆಸರು ಬದಲಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಕಾರ್ಡ್‌ನಲ್ಲಿ 'ದೇವರಕೊಂಡ ವಿಜಯ್ ಸಾಯಿ' ಎಂದು ಹೆಸರು ಬದಲಾಯಿಸಲಾಗಿದೆ. ಹಿಂದಿನ ಸಿನಿಮಾಗಳ ಸೋಲು ಹೆಸರು ಬದಲಾಗಲು ಕಾರಣ ಎನ್ನಲಾಗುತ್ತಿದೆ. ನೋಟಾ, ಟ್ಯಾಕ್ಸಿವಾಲಾ, ಡಿಯರ್‌ ಕಾಮ್ರೇಡ್‌ ಸೋಲಿನಿಂದ ಹೊರಬರಲು ವಿಜಯ್‌ ಹೆಸರು ಬದಲಾವಣೆಗೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅರ್ಜುನ್‌ ರೆಡ್ಡಿ ಮತ್ತು ಗೀತ ಗೋವಿಂದಂ ನಂತರ ಬಂದ ವಿಜಯ್‌ ಅಭಿನಯದ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸು ಗಳಿಸಿಲ್ಲ. 

'ವರ್ಲ್ಡ್ ಫೇಮಸ್ ಲವರ್' ಟೀಸರ್‌ಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಅರ್ಜುನ್ ರೆಡ್ಡಿ' ಸಿನಿಮಾದ ಮಾದರಿಯಲ್ಲಿ ಈ ಸಿನಿಮಾದ ಟೀಸರ್ ಇದೆ ಎಂದು ಅನೇಕರು ಬೇಸರ ಹೊರಹಾಕುತ್ತಿದ್ದಾರೆ. ಯುಟ್ಯೂಬ್‌ನಲ್ಲಿ ಶನಿವಾರ ಬಿಡುಗಡೆಯಾದ ಟೀಸರ್ ಅನ್ನು 10 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕ್ರಾಂತಿ ಮಾಧವ್ ಚಿತ್ರಕತೆ ಬರೆದು, ನಿರ್ದೇಶಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು