ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಹೀರಾತಿಗಾಗಿ ತೆರೆ ಮೇಲೆ ಒಂದಾದ ಯಶ್ ಹಾಗೂ ರಾಧಿಕಾ!

Last Updated 18 ಡಿಸೆಂಬರ್ 2020, 7:48 IST
ಅಕ್ಷರ ಗಾತ್ರ

ಕಳೆದೊಂದು ದಶಕದಿಂದ ಚಂದನವನದ ಸೂಪರ್‌ ಜೋಡಿ ಎನ್ನಿಸಿಕೊಂಡಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಮತ್ತೆ ತೆರೆ ಮೇಲೆ ಒಂದಾಗಿ ಕಾಣಿಸಿಕೊಂಡಿದ್ದಾರೆ. ಈ ಜೋಡಿ ‘ಸಂತು straight forward’ ಸಿನಿಮಾದಲ್ಲಿ ಕೊನೆ ಬಾರಿ ತೆರೆ ಮೇಲೆ ಕಾಣಿಸಿದ್ದರು. ಬೆಳ್ಳಿತೆರೆಯಲ್ಲಿ ‘ರಾಕಿಂಗ್ ಕಪಲ್’ ಎನ್ನಿಸಿಕೊಂಡಿರುವ ಇವರು ಅನೇಕ ಹಿಟ್‌ ಸಿನಿಮಾಗಳನ್ನು ನೀಡಿ‌ದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ರಾಧಿಕಾ ಮಕ್ಕಳೊಂದಿಗೆ ಖುಷಿಯಿಂದ ದಿನ ಕಳೆಯುತ್ತಿದ್ದಾರೆ. ಯಶ್‌ ಕೆಜಿಎಫ್‌ ಭಾಗ–2ರ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಯಶ್‌–ರಾಧಿಕಾ ಜೋಡಿಯನ್ನು ಮತ್ತೆ ತೆರೆ ಮೇಲೆ ಒಂದಾಗಿ ಕಾಣಬೇಕು ಎಂಬುದು ಅಭಿಮಾನಿಗಳ ಬಹುದಿನದ ಬಯಕೆಯಾಗಿತ್ತು. ಈಗ ಅಭಿಮಾನಿಗಳ ನಿರೀಕ್ಷೆಯನ್ನು ನಿಜಗೊಳಿಸಿದ್ದಾರೆ ಈ ದಂಪತಿ. ಅಡುಗೆಎಣ್ಣೆಯ ಜಾಹೀರಾತೊಂದರಲ್ಲಿ ಇವರು ಒಂದಾಗಿ ನಟಿಸಿದ್ದಾರೆ. ಈ ವಿಷಯವನ್ನು ಇಬ್ಬರೂ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ.

ಗಂಡ–ಹೆಂಡತಿ ಜೊತೆಯಾಗಿ ನಿಂತ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ರಾಧಿಕಾ ‘ನಾಲ್ಕು ವರ್ಷಗಳ ಬಳಿಕ ನನ್ನ ನೆಚ್ಚಿನ ಸಹನಟನ ಜೊತೆ ನಟಿಸಿದ್ದಕ್ಕೆ ತುಂಬಾನೇ ಖುಷಿ ಇದೆ. ಜಾಹೀರಾತಿನಲ್ಲಿ ನಾವು ಒಂದಾಗಿ ಕೆಲಸ ಮಾಡಿದ್ದು ನಮಗೆ ತುಂಬಾನೇ ಖುಷಿ ಇದೆ. ಅಷ್ಟೇ ಖುಷಿ ನಿಮಗೂ ಆಗಿದೆ ಎಂದುಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಜಾಹೀರಾತಿನ ವಿಡಿಯೊವನ್ನು ಹಂಚಿಕೊಂಡಿರುವ ಯಶ್‌ ಅಭಿಮಾನಿ ಹಾಗೂ ಅನುಯಾಯಿಗಳಿಗೆ ಆರೋಗ್ಯಕರ ಜೀವನಪದ್ಧತಿಯನ್ನು ಪಾಲಿಸಿ ಎಂಬ ಕರೆ ನೀಡಿದ್ದಾರೆ.

ಈ ಜೋಡಿಯನ್ನು ಒಂದಾಗಿ ತೆರೆ ಮೇಲೆ ನೋಡಿದ ಅಭಿಮಾನಿಗಳು ಮಾತ್ರವಲ್ಲ ಕನ್ನಡ ಚಿತ್ರರಂಗದ ನಟ–ನಟಿಯರು ಖುಷಿಯಾಗಿದ್ದಾರೆ. ಅಲ್ಲದೇ ನಟಿಯರಾದ ಆಶಿಕಾ ರಂಗನಾಥ್‌, ಶಾನ್ವಿ ಶ್ರೀವಾಸ್ತವ್‌ ಹಾಗೂ ರಾಗಿಣಿ ಪ್ರಜ್ವಲ್ ಮೊದಲಾದವರು ಕಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಈ ಜೋಡಿಯನ್ನು ಮತ್ತೆ ಆದಷ್ಟು ಬೇಗ ಬೆಳ್ಳಿತೆರೆ ಮೇಲೆ ನೋಡುವ ನಿರೀಕ್ಷೆ ಅಭಿಮಾನಿಗಳದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT