ಶುಕ್ರವಾರ, ಅಕ್ಟೋಬರ್ 7, 2022
23 °C

ಶಾರುಖ್ ಖಾನ್ ಹಾಗೂ ವಿಜಯ್ ನನ್ನ ಆಧಾರ ಸ್ಥಂಭಗಳು: ನಿರ್ದೇಶಕ ಅಟ್ಲೀ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಖ್ಯಾತ ನಿರ್ದೇಶಕ ಅಟ್ಲೀ ಅವರು ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಹಾಗೂ ತಮಿಳು ಸಿನಿಮಾರಂಗದ ಸೂಪರ್‌ಸ್ಟಾರ್‌ ವಿಜಯ್‌ ಅವರೊಂದಿಗೆ ತಮ್ಮ 36ನೇ ವರ್ಷದ ಜನ್ಮ‌ದಿನ ಆಚರಿಸಿಕೊಂಡಿದ್ದಾರೆ.

ಸೆಪ್ಟೆಂಬರ್‌ 21 ರಂದು (ಬುಧವಾರ) ಜನ್ಮದಿನ ಆಚರಿಸಿಕೊಂಡಿರುವ ಅಟ್ಲೀ‌, ಶಾರುಖ್‌ ಮತ್ತು ವಿಜಯ್‌ ಜೊತೆ ಇರುವ ಚಿತ್ರವನ್ನು ಗುರುವಾರ ರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

'ಇದಕ್ಕಿಂತ ಇನ್ನೇನು ಕೇಳಲಿ. ನನ್ನ ಆಧಾರ ಸ್ಥಂಭಗಳಾದ ಶಾರುಖ್‌ ಖಾನ್ ಸರ್‌ ಹಾಗೂ ನನ್ನ ಅಣ್ಣ, ನನ್ನ ದಳಪತಿ ವಿಜಯ್‌ ಅವರೊಂದಿಗೆ ಇದುವರೆಗಿನ ಅತ್ಯುತ್ತಮ ಜನ್ಮದಿನ ಆಚರಿಸಿಕೊಂಡಿದ್ದೇನೆ' ಎಂದು ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅಟ್ಲೀ–ವಿಜಯ್‌ ಜೋಡಿಯ ಥೇರಿ, ಮೆರ್ಸಲ್‌ ಮತ್ತು ಬಿಗಿಲ್‌ ಸಿನಿಮಾಗಳು ಭಾರಿ ಯಶಸ್ಸು ಕಂಡಿವೆ. ಇದೀಗ 'ಜವಾನ್‌' ಸಿನಿಮಾ ಮೂಲಕ ಶಾರುಖ್‌ ಖಾನ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಅಟ್ಲೀ, ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಜನ್ಮದಿನದ ಪ್ರಯುಕ್ತ ಅಟ್ಲೀ ಅವರಿಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು. ಅಭಿಮಾನಿಗಳನ್ನು ಉದ್ದೇಶಿಸಿ ಗುರುವಾರ ಸಂಜೆ ಟ್ವೀಟ್ ಮಾಡಿದ್ದ ಅವರು, 'ನನಗೆ ಹಾರೈಸಲು ಸಮಯ ಮೀಸಲಿಟ್ಟ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದವರಿಗೆ ಧನ್ಯವಾದಗಳು. ನನ್ನ ಜನ್ಮದಿನವನ್ನು ಸ್ಮರಣೀಯವಾಗಿಸಿದ ಪ್ರತಿಯೊಬ್ಬರಿಗೂ ನಮನಗಳು' ಎಂದು ಸಂದೇಶ ಹಂಚಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು