ಶನಿವಾರ, ಸೆಪ್ಟೆಂಬರ್ 25, 2021
30 °C

ಏಲಿಯನ್‌ನಂತೆ ಉಡುಗೆ ತೊಟ್ಟು ನೋಡುಗರನ್ನು ಚಕಿತಗೊಳಿಸಿದ ಈ ಮಾಡೆಲ್ ಯಾರು?

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೆರಿಕದ ಖ್ಯಾತ ಮಾಡೆಲ್ ಹಾಗೂ ಟೆಲಿವಿಷನ್ ತಾರೆ ಕಿಮ್ ಕರದಾಶೈನ್ ಫ್ಯಾಶನ್ ಲೋಕದ ರಾಣಿ. ಅವರು ಹೊರಹೊಮ್ಮಿಸುವ ಒಂದೊಂದು ಫ್ಯಾಶನ್‌ಗಳು ಫ್ಯಾಶನ್ ಲೋಕದಲ್ಲಿ ಟ್ರೆಂಡ್ ಸೃಷ್ಟಿಸುತ್ತವೆ.

ಹೀಗೆ ಕಳೆದ ಭಾನುವಾರ ಕಿಮ್ ಹಾಕಿದ್ದ ಉಡುಗೆಯೊಂದು ಸಖತ್ ವೈರಲ್ ಆಗಿದೆ. ಅವರ ವೇಷ ಕಂಡು ನೆಟ್ಟಿಗರು ಹೌಹಾರಿದ್ದಾರೆ. ಏಕೆಂದರೆ ಕಿಮ್ ತೊಟ್ಟ ಉಡುಗೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ.

 

ಸಂಪೂರ್ಣ ಮುಖ ಹಾಗೂ ದೇಹವನ್ನು ಲೆದರ್ ಉಡುಗೆಯಲ್ಲಿ ಮುಚ್ಚಿ, ಮುಖವನ್ನು ಕೂಡ ಲೆದರ್ ಮಾಸ್ಕ್‌ನಿಂದ ಮುಚ್ಚಿ ಒಂದು ರೀತಿ ಏಲಿಯನ್ ರೀತಿ ಕಾಣುವ ಹಾಗೇ ಕಿಮ್ ಕಂಡು ಬಂದಿದ್ದಾರೆ. ಅವರು ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಗಾಲಾ2021 ಫ್ಯಾಶನ್ ಶೋ ಕಾರ್ಯಕ್ರಮಕ್ಕೆ ಈ ರೀತಿ ಉಡುಗೆ ಧರಿಸಿ ಬಂದಿದ್ದರು. ಈ ವೇಷದಲ್ಲಿ ಕಿಮ್‌ ಕಂಡು ಪ್ರೇಕ್ಷಕರು ಇದು ಯಾರು? ಎಂದು ಗೊಂದಲಕ್ಕೆ ಒಳಗಾಗಿದ್ದರು.

ಸಂಪೂರ್ಣ ದೇಹವನ್ನು ಮುಚ್ಚಿದ್ದ ಉಡುಗೆಯೊಂದಿಗೆ ಎತ್ತರದ ಚಪ್ಪಲಿಗಳನ್ನು ಧರಿಸಿ ಕಿಮ್ ನಡೆದುಕೊಂಡು ಹೋಗುತ್ತಿರುವ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲಾತಣಗಳಲ್ಲಿ ಅವರೇ ಪ್ರಕಟಿಸಿದ್ದಾರೆ. ನೋಡುಗರೆಲ್ಲರೂ, ‘ಹೌದಪ್ಪಾ ಹೌದು, ಫ್ಯಾಶನ್ ಅಂದ್ರೆ ಇದು‘ ಎಂದು ಉದ್ಘಾರ ತೆಗೆದಿದ್ದಾರೆ.

ಇದನ್ನೂ ಓದಿ: ಮೇಕಪ್ ಇಲ್ಲದೆಯೇ ಫೋಟೊ ಪೋಸ್ಟ್ ಮಾಡಿದ ಟಿವಿ ನಟಿ ನಿಧಿ ಶಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು